ಕೊಲಂಬೋ: ಶ್ರೀಲಂಕಾದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಲಂಕಾ ಅಧ್ಯಕ್ಷರು ವಾಪಸ್ ಪಡೆದಿದ್ದಾರೆ.
ಮೈತ್ರಿಪಾಲ ಸಿರಿಸೇನಾ ಅವರ ಕಾರ್ಯದರ್ಶಿ ಆಸ್ಟಿನ್ ಫರ್ನಾಂಡೋ ಈ ಬಗ್ಗೆ ಮಾಹಿತಿ ನೀಡಿದ್ದು, ತುರ್ತುಪರಿಸ್ಥಿತಿ ಹಿಂಪಡೆಯುತ್ತಿರುವ ಆದೇಶಕ್ಕೆ ಅಧ್ಯಕ್ಷರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾದ ಕ್ಯಾಂಡಿ ಜಿಲ್ಲೆಯಲ್ಲಿ ಕೋಮುಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ ಲಂಕಾ ಅಧ್ಯಕ್ಷರು ತುರ್ತು ಪರಿಸ್ಥಿತಿ ಹೇರಿದ್ದರು.
ಸಾರ್ವಜನಿಕ ಭದ್ರತೆ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲು ಸೂಚಿಸಿದ್ದೇನೆ ಎಂದು ಮೈತ್ರಿಪಾಲ ಸಿರಿಸೇನಾ ಟ್ವೀಟ್ ಮಾಡಿದ್ದಾರೆ.