ತಿರುಪುರದಲ್ಲಿ ತಂದೆಯ ಅಂಗಡಿಯಲ್ಲಿ ಮಾಂಸ ಮಾರಾಟ ಮಾಡುತ್ತಿರುವ ಷಣ್ಮುಗಪ್ರಿಯ 
ದೇಶ

ಉದ್ಯೋಗದ ಚೌಕಟ್ಟನ್ನು ಮೀರಿ ಮಾಂಸ ಮಾರಾಟ ಮಾಡುವ ಕಾಲೇಜು ವಿದ್ಯಾರ್ಥಿನಿ

ಇಂದು ಮಹಿಳೆಯರು ಕೈಯಾಡಿಸದ ಕ್ಷೇತ್ರವಿಲ್ಲ. ತಮ್ಮ ಕುಟುಂಬದವರಿಗೆ ಆರ್ಥಿಕವಾಗಿ ಆಸರೆಯಾಗಿ ...

ತಿರುಪುರ್: ಇಂದು ಮಹಿಳೆಯರು ಕೈಯಾಡಿಸದ ಕ್ಷೇತ್ರವಿಲ್ಲ. ತಮ್ಮ ಕುಟುಂಬದವರಿಗೆ ಆರ್ಥಿಕವಾಗಿ ಆಸರೆಯಾಗಿ ನಿಲ್ಲಲು ಮಹಿಳೆಯರು ಕೂಡ ಪುರುಷರಂತೆ ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ತಮಿಳುನಾಡಿನ ತಿರುಪುರದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮಾಂಸ ಮಾರಾಟ ಮಾಡಿ ತನ್ನ ತಂದೆಯ ಉದ್ಯೋಗದಲ್ಲಿ ಒತ್ತಾಸೆಯಾಗಿದ್ದಾಳೆ. ಮಹಿಳೆಯರು ಸಾಮಾನ್ಯವಾಗಿ ಮಾಡಲು ಹಿಂಜರಿಯುವ ಕೆಲಸವಿದು.

ತಿರುಪುರದ ಸರ್ಕಾರಿ ಮಹಿಳಾ ಕಲಾ ಕಾಲೇಜಿನಲ್ಲಿ ಮೂರನೇ ವರ್ಷದ ಪದವಿ ಓದುತ್ತಿರುವ ಷಣ್ಮುಗಪ್ರಿಯ ಕಾಲೇಜಿನ ರಜಾದಿನಗಳಲ್ಲಿ ತನ್ನ ತಂದೆ ಚಿನ್ನಸ್ವಾಮಿ ಜೊತೆ ನಿಂತು ಮಾಂಸ ಮಾರಾಟ ಮಾಡುತ್ತಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ಷಣ್ಮುಗಪ್ರಿಯ, ಅನೇಕ ವರ್ಷಗಳಿಂದ ನನ್ನ ತಂದೆ ಮಾಂಸ ಮಾರಾಟ ಮಾಡುತ್ತಿದ್ದಾರೆ. ನನ್ನ ಚಿಕ್ಕ ತಮ್ಮ ಕೂಡ ಈ ವೃತ್ತಿಗಿಳಿದಿದ್ದಾನೆ. ನಾನು ಕೂಡ ರಜಾದಿನಗಳಲ್ಲಿ ನನ್ನ ತಂದೆಯ ಜೊತೆ ಹೋಗಿ ಕೆಲಸ ಮಾಡುತ್ತೇನೆ, ಎರಡು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.

ಆರಂಭದಲ್ಲಿ ಈ ಕೆಲಸ ಕಷ್ಟವಾಗಿ ಕಂಡರೂ ಇದೀಗ ಮಾಂಸ ತುಂಡು ಮಾಡುವುದು ಸುಲಭ ಎನಿಸಿದೆ. ಆರಂಭದಲ್ಲಿ ಕಷ್ಟವೆನಿಸಿತು. ಈ ಕೆಲಸ ಆರಂಭಿಸಿದ ನಂತರ ವಾಸ್ತವವಾಗಿ ಹೇಳಬೇಕೆಂದರೆ ನಾನು ಮಾಂಸ ತಿನ್ನುವುದನ್ನು ಕೂಡ ಬಿಟ್ಟುಬಿಟ್ಟಿದ್ದೇನೆ. ಆದರೆ ಈ ಕೆಲಸವನ್ನು ಈಗ ಮಾಡುತ್ತಿದ್ದೇನೆ. ನನ್ನ ತಂದೆಗೆ ಕೆಲಸದಲ್ಲಿ ಸಹಾಯ ಮಾಡುವುದು ನನ್ನ ಕರ್ತವ್ಯ. ನನ್ನ ಶಿಕ್ಷಣಕ್ಕೆ ನನ್ನ ಕೆಲಸ ಸಹಾಯವಾಗಿದೆ ಎನ್ನುತ್ತಾರೆ ಷಣ್ಮುಗಪ್ರಿಯ.

ಷಣ್ಮುಗಪ್ರಿಯ ಅವರ ತಂದೆ ಚಿನ್ನಸ್ವಾಮಿಯವರು ಅವರಿಗೆ ಆಸರೆಯಾಗಿದೆ. ನನ್ನ ಸಂಬಂಧಿಕರು ಕೆಲವರು ನನ್ನನ್ನು ಮದುವೆ ಮಾಡಿಸು ಎಂದಾಗ ತಂದೆ ಓದು ಪೂರ್ಣಗೊಳಿಸಲು ನನಗೆ ಬೆಂಬಲಿಸಿದರು. ಸ್ನಾತಕೋತ್ತರ ಪದವಿ ಮಾಡಿ ಅಧ್ಯಾಪಕಿಯಾಗಬೇಕೆಂದಿದ್ದೇನೆ ಎಂದರು.

ಕಾಲೇಜಿನಲ್ಲಿ ಕೂಡ ಷಣ್ಮುಗಪ್ರಿಯಗೆ ಆಕೆಯ ಸಹಪಾಠಿಗಳು ಬೆಂಬಲ ನೀಡುತ್ತಾರಂತೆ. ನಾನು ಉತ್ತಮ ಕೆಲಸ ಮಾಡುತ್ತಿದ್ದೇನೆ, ಇಲ್ಲಿ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ನಮ್ಮ ನಮ್ಮ ಮನಸ್ಸಿಗೆ ಬಿಟ್ಟ ವಿಚಾರವದು ಎನ್ನುತ್ತಾರೆ.

ನನ್ನ ಸಾಂಪ್ರದಾಯಿಕ ವೃತ್ತಿಯಾದ ಮಾಂಸ ಮಾರಾಟವನ್ನು 40 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದೇನೆ. ನನ್ನ ಮಗಳು ಕೂಡ ಸ್ವ ಆಸಕ್ತಿಯಿಂದ ಮಾಂಸ ಮಾರಾಟ ಮಾಡುತ್ತಿದ್ದಾಳೆ. ಹುಡುಗಿ ಮಾಂಸ ಮಾರಾಟ ಮಾಡಲು ನೀವು ಏಕೆ ಬಿಡುತ್ತೀರಿ ಎಂದು ಹಲವರು ನನ್ನಲ್ಲಿ ಕೇಳುತ್ತಾರೆ. ಅದಕ್ಕೆ ನಾನು ಕೆಲಸದಲ್ಲಿ ಘನತೆ, ಮೌಲ್ಯವೆಂಬುದಿಲ್ಲ. ಹಲವು ವರ್ಷಗಳಿಂದ ನಾನು ಮಾಡಿಕೊಂಡು ಬಂದಿರುವ ಕೆಲಸವನ್ನು ನನ್ನ ಮಗಳು ಮಾಡಬಾರದೇಕೆ? ಚೆನ್ನಾಗಿ ಮಾಡುತ್ತಿದ್ದಾಳೆ, ಆಕೆಯ ಕೆಲಸ ಶಿಕ್ಷಣಕ್ಕೆ ಕೂಡ ಸಹಾಯವಾಗುತ್ತಿದೆ ಎನ್ನುತ್ತಾರೆ ಚಿನ್ನಸ್ವಾಮಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT