ದೇಶ

ಇಳಯರಾಜ ಸೇರಿ 43 ಮಂದಿಗೆ ನಾಳೆ ಪದ್ಮ ಪ್ರಶಸ್ತಿ ಪ್ರದಾನ

Lingaraj Badiger
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಮಂಗಳವಾರ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಹಿಂದೂತ್ವ ವಿಚಾರವಾದಿ ಪರಮೇಶ್ವರನ್ ಮತ್ತು ಇತರೆ 41 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ನಾಳೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2018ನೇ ಸಾಲಿನಲ್ಲಿ ಮೂವರಿಗೆ ಪದ್ಮ ವಿಭೂಷಣ, ಇಳಯರಾಜ ಸೇರಿ ಒಂಬತ್ತು ಗಣ್ಯರಿಗೆ ಪದ್ಮ ಭೂಷಣ ಹಾಗೂ 72 ಮಂದಿಗೆ ಪದ್ಮ ಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ. 
ನಾಳೆ ಒಟ್ಟು 43 ಗಣ್ಯರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, ಉಳಿದ ಗಣ್ಯರಿಗೆ ಏಪ್ರಿಲ್ 2ರಂದು ಪ್ರದಾನ ಮಾಡಲಿದ್ದಾರೆ.
ಕರ್ನಾಟಕದ ಆಟಗಾರ ಪಂಕಜ್ ಅಡ್ವಾಣಿ ಪದ್ಮ ಭೂಷಣ ಗೌರವಕ್ಕೆ ಪಾತ್ರರಾದರೆ ಸೂಲಗಿತ್ತಿ ನರಸಮ್ಮ, ಕವಿ ದೊಡ್ಡರಂಗೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.
SCROLL FOR NEXT