ದೇಶ

ಜಿಹಾದ್ ಬೋಧನೆ ನಿಲ್ಲಿಸಿ, ಉತ್ತಮ ಮಾರ್ಗ ತೋರಿಸಿ; ಮೌಲ್ವಿಗಳಿಗೆ ಸಿಎಂ ಮೆಹಬೂಬಾ ಮುಫ್ತಿ

Manjula VN
ಶ್ರೀನಗರ: ಮಸೀದಿಗಳಲ್ಲಿ ಜಿಹಾದ್ ಕುರಿತ ಬೋಧನೆ ನಿಲ್ಲಿಸಿ, ಜನತೆಗೆ ಉತ್ತಮವಾದ ಮಾರ್ಗವನ್ನು ತೋರಿಸಿ ಎಂದು ಮ1ಲ್ವಿಗಳಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಸೋಮವಾರ ಮನವಿ ಮಾಡಿಕೊಂಡಿದ್ದಾರೆ.
ಶ್ರೀನಗರಲ್ಲಿ ನಡೆದ ಕಾರ್ಯಕ್ರಮದವೊಂದರಲ್ಲಿ ಮಾತನಾಡಿರುವ ಅವರು, ಇಸ್ಲಾಂ ಶಾಂತಿಯ ಧರ್ಮವಾಗಿದೆ. ಇದು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ. ಇಡೀ ಮಾನವಕುಲಕ್ಕೆ ಮತ್ತು ಸಸ್ಯ ಹಾಗೂ ಪ್ರಾಣಿ ಸಂಕುಲಕ್ಕೆ ಮಾರ್ಗದರ್ಶನ ಸೂತ್ರಗಳನ್ನು ನೀಡಿದೆ. ಜ್ಞಾನ ಪಡೆದುಕೊಳ್ಳಲು ಇಸ್ಲಾಂನಲ್ಲಿ ಸಾಕಷ್ಟು ಮಹತ್ವವನ್ನು ನೀಡಲಾಗಿದೆ. ವಿದ್ವಾಂಸರು ಹಾಗೂ ಮೌಲ್ವಿಗಳು ಈ ಸಂದೇಶವನ್ನು ಜನರಿಗೆ ನೀಡಬೇಕಿದೆ. ಇದರಿಂದ ಮುಸ್ಲಿಮರು ತಮ್ಮ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 
ಸ್ವರ್ಗಕೆಕ ಹೋಗಲು ಯಾವುದೇ ರೀತಿಯ ಹತ್ತಿರ ಮಾರ್ಗಗಳಿಲ್ಲ. ಶಸ್ತ್ರಾಸ್ತ್ರಗಳನ್ನು ಹಿಡಿಯುವುದರಿಂದ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಹೆತ್ತ ತಂದೆ-ತಾಯಿಯ ಪಾದದಲ್ಲಿ ಸ್ವರ್ಗವಿದೆ ಎಂದು ತಿಳಿಸಿದ್ದಾರೆ. 
ಯುವಕರನ್ನು ಸರಿಹಾದಿಗೆ ಕರೆದೊಯ್ಯಲು ಮೌಲ್ವಿಗಳು ಹಾಗೂ ವಿದ್ವಾಂಸರು ಮುಂದೆ ಬರಬೇಕು ಎಂದಿದ್ದಾರೆ. 
SCROLL FOR NEXT