ನವದೆಹಲಿ: ನೇಪಾಳ ದೇಶದ ವಿದೇಶಾಂಗ ಸಚಿವನಾಗಿ ಪ್ರದೀಪ್ ಕುಮಾರ್ ಗಯಾವಲಿ ಅವರು ನೇಮಕ ಗೊಂಡಿದ್ದು, ಈ ಹಿನ್ನಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಭಾಶಯಗಳನ್ನು ಕೋರಿದ್ದು, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ನೇಪಾಳ ವಿದೇಶಾಂಗ ಸಚಿವರಿಗೆ ದೂರವಾಣಿ ಕರೆ ಮಾಡಿರುವ ಸುಷ್ಮಾ ಸ್ವರಾಜ್ ಅವರು ಶುಭಾಶಯ ಕೋರಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆಂದು ನೇಪಾಳದಲ್ಲಿರುವ ಭಾರತದ ವಿದೇಶಾಂಗ ಕಚೇರಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ.
ಮಾ.16 ರಂದು ಪ್ರದೀಪ್ ಕುಮಾರ್ ಗಯಾವಲಿ ಅವರಿಗೆ ಕರೆ ಮಾಡಿದ ಸುಷ್ಮಾ ಸ್ವರಾಜ್ ಅವರು, ಶುಭಾಶಯಗಳನ್ನು ಕೋರಿದ್ದಾರೆ, ಅಲ್ಲದೆ, ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಭಾರತ-ನೇಪಾಳದ ದ್ವಿಪಕ್ಷೀಯ ಸಂಬಂಧದ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂಬ ವಿಶ್ವಾಸವಿದೆೆಂದು ತಿಳಿಸಿದ್ದಾರೆಂದು ತಿಳಿಸಿದೆ.