ದೇಶ

ಆಂಧ್ರ ಪ್ರದೇಶ: ಹಾರ್ಟ್ ಅಟ್ಯಾಕ್ ಆದರೂ ಸಾಯುವ ಮುನ್ನ ಪ್ರಯಾಣಿಕರನ್ನು ರಕ್ಷಿಸಿದ ಬಸ್ ಚಾಲಕ

Sumana Upadhyaya

ಗುಂಟೂರು: ಬಸ್ಸು ಚಲಾಯಿಸುತ್ತಿದ್ದಾಗ ಮಾರ್ಗ ಮಧ್ಯೆ ಹೃದಯಾಘಾತಕ್ಕೀಡಾದ ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ ಚಾಲಕ ತಾನು ಸಾಯುವ ಮುನ್ನ ಬಸ್ಸಿನಲ್ಲಿದ್ದ ಪ್ರಯಾಣಿಕರ ಜೀವವನ್ನು ಬದುಕಿಸಿದ ಘಟನೆ ಗುಂಟೂರು ಜಿಲ್ಲೆಯ ಕಾರಂಪುಡಿ ಮಂಡಲದ ಜುಲಾಕಲ್ಲು ಗ್ರಾಮದಲ್ಲಿ ನಡೆದಿದೆ.

ಬಸ್ಸು ಚಾಲಕ ಸೈಯದ್ ಖಾಜಿ ಬಾಬ ಪಿಡುಗುರಲ್ಲದಿಂದ ಇಂದು ಬೆಳಗ್ಗೆ 9.30ರ ಸುಮಾರಿಗೆ ಕಾರಂಪುಡಿ ಮಂಡಲ ಮಾರ್ಗದಲ್ಲಿ ಬಸ್ಸು ಚಲಾಯಿಸುತ್ತಿದ್ದರು. ಆ ಸಂದರ್ಭದಲ್ಲಿ ಹೃದಯದಲ್ಲಿ ಬೇನೆ ಕಾಣಿಸಿಕೊಂಡಿತು. ಬಸ್ಸು ಚಲಾಯಿಸುತ್ತಿದ್ದಾಗ ಮಾರ್ಗ ಮಧ್ಯೆ ನೋವು ಕಾಣಿಸಿಕೊಂಡರೂ ಸಹ ಅಪಘಾತಕ್ಕೀಡಾಗಬಾರದೆಂದು ಬಸ್ಸುನ್ನು ಚಲಾಯಿಸಿ ಮಾರ್ಗದ ಬದಿಗೆ ಚಲಾಯಿಸಿಕೊಂಡು ಹೋದರು. ಅದು ಒಂದು ಮರಕ್ಕೆ ಹೋಗಿ ಬಡಿಯಿತು. 52 ವರ್ಷದ ಸೈಯದ್ ಅವರಿಗೆ ನೋವು ಕಾಣಿಸಿಕೊಂಡಾಗ ತನ್ನ ಜೀವಕ್ಕಿಂತ ಹೆಚ್ಚು ಮುಖ್ಯವಾಗಿದ್ದು ಬಸ್ಸಿನಲ್ಲಿದ್ದ 45 ಮಂದಿ ಪ್ರಯಾಣಿಕರ ಜೀವ.

ರಸ್ತೆ ಬದಿಯಲ್ಲಿ ಬಸ್ಸು ನಿಲ್ಲಿಸಲು ಪ್ರಯತ್ನಿಸಿದರೂ ಕೂಡ ಅದು ಮರವೊಂದಕ್ಕೆ ಹೋಗಿ ಡಿಕ್ಕಿ ಹೊಡೆಯಿತು. ಸಣ್ಣಪುಟ್ಟ ಗಾಯಗೊಂಡ 12 ಮಂದಿ ಪ್ರಯಾಣಿಕರನ್ನು ಪಿಡುಗುರಲ್ಲ ಆಸ್ಪತ್ರೆಗೆ ದಾಖಲಿಸಲಾಯಿತು. ಬಸ್ಸು ಹಠಾತ್ತನೆ ನಿಂತಾಗ ಕೆಲವು ಪ್ರಯಾಣಿಕರು ಚಾಲಕನತ್ತ ಧಾವಿಸಿದರು. ಅಷ್ಟು ಹೊತ್ತಿಗೆ ಸ್ಟೀರಿಂಗ್ ವೀಲ್ ನಲ್ಲಿ ಚಾಲಕ ಕುಸಿದು ಬಿದ್ದಿದ್ದರು. ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದರೂ ಕೂಡ ಅಷ್ಟು ಹೊತ್ತಿಗೆ ಖಾಜಿ ಬಾಬಾರ ಪ್ರಾಣಪಕ್ಷಿ ಹಾರಿಹೋಗಿತ್ತು.

ಚಾಲಕನಿಗೆ ಪ್ರಯಾಣಿಕರ ಮೇಲಿದ್ದ ಕಾಳಜಿಯನ್ನು ಎಲ್ಲರೂ ಕೊಂಡಾಡಿದ್ದಾರೆ.ಆದರೆ ಅವರನ್ನು ಬದುಕುಳಿಸುವ ಜನರ ಪ್ರಯತ್ನ ಫಲಗೂಡಲಿಲ್ಲ.

SCROLL FOR NEXT