ದೇಶ

ಯಥಾ ಸ್ಥಿತಿಯ ಬದಲಾವಣೆಗೆ ಚೀನಾದ ಯತ್ನ ಮತ್ತೊಂದು ಡೊಕ್ಲಾಮ್ ಗೆ ಕಾರಣವಾಗಬಹುದು: ಅಧಿಕಾರಿ

Srinivas Rao BV
ಬೀಜಿಂಗ್: ಭಾರತದ ಗಡಿ ಪ್ರದೇಶದಲ್ಲಿ ಯಥಾ ಸ್ಥಿತಿಯನ್ನು ಬದಲಾವಣೆ ಮಾಡಲು ಚೀನಾ ಯತ್ನಿಸಿದರೆ ಅದು ಮತ್ತೊಂದು ಡೊಕ್ಲಾಮ್ ವಿವಾದಕ್ಕೆ ಕಾರಣವಾಗಬಹುದು ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಗೌತಮ್ ಬಂಬಾವಾಲೆ ಎಚ್ಚರಿಸಿದ್ದಾರೆ. 
ಮತ್ತೊಂದು ಡೊಕ್ಲಾಮ್ ನಡೆಯಬಾರದೆಂದರೆ ಉಭಯ ರಾಷ್ಟ್ರಗಳು ನೇರ ಮಾತುಕತೆಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಹಾಂಕ್ ಕಾಂಗ್ ಮೂಲದ ಸೌತ್ ಚ್ನಾ ಮಾರ್ನಿಂಗ್ ಪೋಸ್ಟ್ ಗೆ ಸಂದರ್ಶನ ನೀಡಿರುವ ವೇಳೆ ಗೌತಮ್ ಬಂಬಾವಾಲೆ ಈ ಎಚ್ಚರಿಕೆ ರವಾನೆ ಮಾಡಿದ್ದು, ಭಾರತ-ಚೀನಾ ನಡುವೆ ಪ್ರತ್ಯೇಕವಾಗದೇ ಉಳಿದಿರುವುದೇ ಉಭಯ ದೇಶಗಳ ನಡುವಿನ ಗಂಭೀರ ಸಮಸ್ಯೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಭಾರತ-ಚೀನಾ ನಡುವಿನ ಗಡಿಯನ್ನು ಶೀಘ್ರವೇ ಮತ್ತೊಮ್ಮೆ ಅಧಿಕೃತವಾಗಿ ನಿರ್ಧರಿಸಬೇಕು, ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯನ್ನು ಭಾರತ ವಿರೋಧಿಸುತ್ತದೆ. ಆದರೆ ಚೀನಾದೊಂದಿಗೆ ಆ ವಿಷಯ ವಿವಾದವಾಗದಂತೆ ಎಚ್ಚರಿಕೆ ವಹಿಸುತ್ತದೆ ಎಂದು ಗೌತಮ್ ಬಂಬಾವಾಲೆ ಹೇಳಿದ್ದಾರೆ. 
ಜೂನ್ ನಲ್ಲಿ ಚೀನಾದ್ಲಲಿ ನಡೆಯಲಿರುವ ಎಸ್ ಸಿಒ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಎಂಬುದನ್ನೂ ಇದೇ ಸಂದರ್ಶನದಲ್ಲಿ ಗೌತಮ್ ಬಂಬಾವಾಲೆ ಸ್ಪಷ್ಟಪಡಿಸಿದ್ದಾರೆ. 
SCROLL FOR NEXT