ದೇಶ

ಭಾರತದ ಮೇಲಿನ ಗೌರವ ಪ್ರತಿಬಾರಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡುತ್ತದೆ; ಜರ್ಮನ್ ಅಧ್ಯಕ್ಷ

Manjula VN
ನವದೆಹಲಿ: ಭಾರತ ದೇಶ ಮತ್ತು ಭಾರತೀಯ ಸಾಧನೆಗಳ ಬಗ್ಗೆ ನನಗಿರುವ ಗೌರವ ಪ್ರತೀಬಾರಿ ನನ್ನನ್ನು ಭಾರತಕ್ಕೆ ಬರುವಂತೆ ಮಾಡುತ್ತದೆ ಎಂದು ಭಾರತ ಪ್ರವಾಸದಲ್ಲಿರುವ ಜರ್ಮನ್ ಅಧ್ಯಕ್ಷ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ಅವರು ಶನಿವಾರ ಹೇಳಿದ್ದಾರೆ. 
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಡಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ಭಾರತ ದೇಶ ಮತ್ತು ಭಾರತೀಯ ಸಾಧನೆಗಳ ಬಗ್ಗೆ ನನಗಿರುವ ಗೌರವ ಪ್ರತೀಬಾರಿ ನನ್ನನ್ನು ಭಾರತಕ್ಕೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ. 
ಹಲವಾರು ಬಾರಿ ನಾನು ಭಾರತಕ್ಕೆ ಆಗಮಿಸಿದ್ದಾರೆ. ಆದರೆ, ಜರ್ಮನ್ ಅಧ್ಯಕ್ಷನಾಗಿ ಇದು ನನ್ನ ಮೊದಲನೇ ಭೇಟಿಯಾಗಿದೆ. ಭಾರತ ಮತ್ತು ಭಾರತೀಯರ ಸಾಧನೆಗಭ ಬಗ್ಗೆ ನನಗಿರುವ ಗೌರವ ಪ್ರತೀ ಬಾರಿ ಇಲ್ಲಿಗೆ ಅಗಮಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ. 
ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ಅವರು ರಾಷ್ಟ್ರಪತಿ ಮಹಾತ್ಮ ಗಾಂಧೀಯವರ ಸಮಾಧಿ ಬಳಿ ತೆರಳಿ ಪುಷ್ಟ ನಮನಗಳನ್ನು ಸಲ್ಲಿಸಿದರು. 
ಜರ್ಮನ್ ಅಧ್ಯಕ್ಷ ಫ್ರಾಂಕ್‌ ವಾಲ್ಟರ್‌ ಸ್ಟೈನ್ಮಿಯರ್‌ ಅವರು ನಾಲ್ಕು ದಿನಗಳ ಭಾರತ ಪ್ರವಾಸವನ್ನು ಕೈಗೊಂಡಿದ್ದು. ಮಾ.22 ರಂದು ತಮ್ಮ ಪತ್ನಿಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
SCROLL FOR NEXT