ದೇಶ

ಭಯೋತ್ಪಾದಕರಿಗೆ ಆರ್ಥಿಕ ನೆರವು: ಖಾಸಗಿ ಹೂಡಿಕೆ ಸಂಸ್ಥೆಗಳಲ್ಲಿ ಶೋಧ ಕಾರ್ಯಾಚರಣೆ

Srinivas Rao BV
ರಾಂಚಿ: ಮಾವೋವಾದಿಗಳು, ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ರಾಂಚಿಯಲ್ಲಿ ಖಾಸಗಿ ಹೂಡಿಕೆ ಸಂಸ್ಥೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 
ಬೆರೊ ಹಾಗೂ ಸಂದೀಪ್ ಟವರ್ ಗಳಲ್ಲಿರುವ ವಿಕಾಸ್ ಮ್ಯೂಚುಯಲ್ ಬೆನಿಫಿಟ್ ನಿಧಿ ಸಂಸ್ಥೆಗಳಲ್ಲಿ ಶೋಧಕಾರ್ಯಾಚರಣೆ ನದೆದಿದ್ದು, ಈ ಸಂಸ್ಥೆ ತನ್ನ ವಿವಿಧ ಯೋಜನೆಗಳ ಮೂಲಕ ಮಾವೋವಾದಿ ಭಯೋತ್ಪಾದನಾ ನಿಧಿ ಹೂಡಿಕೆ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಪಡೆದಿದೆ ಎಂದು ತನಿಖಾ ತಂಡ ಆರೋಪಿಸಿದೆ. ಈ ಸಂಬಂಧ ಜನವರಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೋಧಕಾರ್ಯಾಚರಣೆ ನಡೆದಿದೆ. 
ಇದೇ ಪ್ರಕರಣದಲ್ಲಿ ಎನ್ಐಎ ಮಾ.21 ರಂದು ಹಿರಿಯ ಸಿಪಿಐ-ಎಂ ನಾಯಕ ಸಂತೋಷ್ ಒರಾನ್ ಮತ್ತು ರೋಶನ್ ಒರಾನ್ ನನ್ನು ಬಂಧಿಸಿತ್ತು. 
SCROLL FOR NEXT