ದೇಶ

ಬಾಯ್ ಫ್ರೆಂಡ್ಸ್ ಮಾಡಿಕೊಳ್ಳಬೇಡಿ, ಇದರಿಂದ ಮಹಿಳೆಯರ ವಿರುದ್ಧ ದೌರ್ಜನ್ಯ ನಿಲ್ಲುತ್ತದೆ: ಬಿಜೆಪಿ ಶಾಸಕ

Shilpa D
ಗುನಾ: ಹೆಣ್ಣು ಮಕ್ಕಳು ಬಾಯ್ ಫ್ರೆಂಡ್ ಗಳನ್ನು ಮಾಡಿಕೊಳ್ಳಬೇಡಿ ಇದರಿಂದ ನೀವು ಚೆನ್ನಾಗಿರುತ್ತೀರಿ ಎಂದು ಮದ್ಯಪ್ರದೇಶ ಬಿಜೆಪಿ ಶಾಸಕ ಪಿಎಲ್ ಶಕ್ಯ ಹೇಳಿದ್ದಾರೆ.
ಹೆಣ್ಣು ಮಕ್ಕಳು ಏಕೆ ಬಾಯ್ ಫ್ರೆಂಡ್ ಗಳನ್ನು ಮಾಡಿಕೊಳ್ಳಬೇಕು, ಒಂದು ವೇಳೆ ಬಾಯ್ ಫ್ರೆಂಡ್ ಮಾಡಿಕೊಳ್ಳುವುದನ್ನು ನಿಲ್ಲಿಸಿದರೇ ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಗುನ ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಯುವಕರು ಕೂಡ ಪಾಶ್ಟಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದು, ಅವರು ಕೂಡ ಗರ್ಲ್ ಫ್ರೆಂಡ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
SCROLL FOR NEXT