ದೇಶ

ಮಾಜಿ ಗೂಢಚಾರಿಗೆ ವಿಷ: ಅಮೆರಿಕ, 14 ಇಯು ರಾಷ್ಟ್ರಗಳಿಂದ ರಷ್ಯಾ ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟನೆ

Srinivas Rao BV
ವಾಷಿಂಗ್ ಟನ್: ಬ್ರಿಟನ್ ನಲ್ಲಿ ರಷ್ಯಾದ ಮಾಜಿ ಗೂಢಚಾರಿಗೆ ವಿಷ ಪ್ರಾಶನ ಮಾಡಿಸಿರುವ ಪ್ರಕರಣದಲ್ಲಿ ಅಮೆರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡಿದ್ದು ಅಮೆರಿಕ ಜೊತೆಗೆ 14 ಯುರೋಪಿಯನ್ ರಾಷ್ಟ್ರಗಳು ರಷ್ಯಾ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿವೆ. 
ಬ್ರಿಟನ್ ಪ್ರಧಾನಿ ಥೆರೇಸಾ ಮೇ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ಮಾತನಾಡಿದ ನಂತರ ಯುರೋಪಿಯನ್ ಒಕ್ಕೂಟ ಈ ನಿರ್ಧಾರ ಕೈಗೊಂಡಿವೆ.  ಅಮೆರಿಕ ಒಂದರಲ್ಲೇ ಸುಮಾರು 60 ರಷ್ಯಾದ ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಛಾಟನೆ ಮಾಡಲಾಗಿದ್ದು, ರಾಜತಾಂತ್ರಿಕ ಸೋಗಿನಲ್ಲಿ ಎಲ್ಲರೂ ರಷ್ಯಾ ಪರವಾಗಿ ಗೂಢಚಾರಿಕೆ ಮಾಡುತ್ತಿದ್ದರು, ಈ ಹಿನ್ನೆಲೆಯಲ್ಲಿ ರಷ್ಯಾಗೆ ಕಠಿಣ ಸಂದೇಶ ರವಾನೆ ಮಾಡಲು ಈ ಕ್ರಮ ಕೈಗೊಂಡಿರುವುದಾಗಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಉಚ್ಚಾಟಿತ ರಾಯಭಾರಿ ಅಧಿಕಾರಿಗಳಿಗೆ ಅಮೆರಿಕದಿಂದ ತೆರಳಲು 7 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT