ಹೈದರಾಬಾದ್: ಸುಡು ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಮಜ್ಜಿಗೆ ಪೂರೈಕೆ ಮಾಡಲಾಗುತ್ತಿದೆ.
ಟ್ರಾಫ್ರಿಕ್ ಸಿಗ್ನಲ್ ಮತ್ತು ರಸ್ತೆಗಳಲ್ಲಿ ಕೆಲಸ ಮಾಡುತ್ತಿರುವ ಸಂಚಾರಿ ಪೊಲೀಸರನ್ನು ಬಿಸಿಯ ಬೇಗೆಯಿಂದ ತಂಪು ಮಾಡಲು ಸಂಚಾರಿ ಪೊಲೀಸ್ ಅಧಿಕಾರಿಗಳು ಪೇದೆಗಳಿಗೆ ತಲಾ ಎರಡು ಮಜ್ಜಿಗೆ ಪ್ಯಾಕೆಟ್ ಗಳನ್ನು ನೀಡಿದರು.
ಸಂಚಾರಿ ಪೊಲೀಸ್ ಪೇದೆಗಳಿಗೆ ಸರ್ಕಲ್ ಇನ್ಸ್ ಪೆಕ್ಟರ್ ಸುಮನ್ ಕುಮಾರ್ ಅವರು ಮಜ್ಜಿಗೆ ಪ್ಯಾಕೆಟ್ ಗಳನ್ನು ನೀಡುತ್ತಿದ್ದರು. ಟ್ರಾಫ್ರಿಕ್ ಸಿಗ್ನಲ್ ಮತ್ತು ರಸ್ತೆಗಳಲ್ಲಿ ಕೆಲಸ ಮಾಡುತ್ತಿರುವ ಸಂಚಾರಿ ಪೊಲೀಸ್ ಪೇದೆಗಳಿಗೆ ಬಿಸಿಯ ಬೇಗೆಯಿಂದ ತಂಪು ಮಾಡಲು ಮಜ್ಜಿಗೆ ಪ್ಯಾಕೆಟ್ ಗಳನ್ನು ನೀಡಿದ್ದಾಗಿ ಹೇಳಿದ್ದಾರೆ.
ಪೊಲೀಸ್ ಪೇದೆಗಳ ದೇಹದ ನೀರಿನ ಮಟ್ಟು ಹಾಗೂ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮಜ್ಜಿಗೆ ಪ್ಯಾಕೆಟ್ ಗಳನ್ನು ನೀಡಲಾಗುತ್ತಿದೆ ಎಂದು ಸುಮನ್ ಕುಮಾರ್ ಹೇಳಿದ್ದಾರೆ.