ದೇಶ

ಫಡ್ನವೀಸ್ ಭೇಟಿ ಹಿನ್ನೆಲೆ, ಅಣ್ಣಾ ಹಜಾರೆ ಉಪವಾಸ ಅಂತ್ಯ

Raghavendra Adiga
ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೃಷಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಡನೆ ಮಾತುಕತೆ ನಡೆಸಿದ ಬಳಿಕ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಏಳು ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸರ್ಕಾರದ ದೂತಾವಾಸ ಹಾಗೂ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಅವರ ಬಹುಪಾಲು ಬೇಡಿಕೆಗಳ ಸಂಬಂಧ ಕಾಳಜಿ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಉಪವಾಸ ಸತ್ಯಾಗ್ರಹದ ಮೊದಲೆರಡು ದಿನ ನೀರಸವಾಗಿದ್ದರೂ ಮೂರನೇ ದಿನ ಅಣ್ಣಾ ಅವರ ಭ್ರಷ್ಠಾಚಾರದ ವಿರುದ್ಧ ಭಾರತದ ಹೋರಾಟಕ್ಕೆ ತಕ್ಕ ಮಟ್ಟಿಗೆ ಉತ್ತಮ ಜನಬೆಂಬಲ ಸಿಕ್ಕಿತ್ತು.
ಕೇಂದ್ರದಲ್ಲಿ ಲೋಕಪಾಲ್ ಹಾಗೂ ಎಲ್ಲಾ ರಾಜ್ಯಗಳಲ್ಲಿ ಲ್ಲೋಕಾಯುಕ್ತ ನೇಮಕ ಮಾಡುವುದು, ರೈತರಿಗೆ ಅವರು ಬೆಳೆದ ಬೆಳ್ಗೆ ಉತ್ತಮ ಬೆಲೆಗಳನ್ನು ನೀಡುವುದು ಹಜಾರೆ ಅವರ ಪ್ರಮುಖ ಬೇಡಿಕೆಗಳಾಗಿದ್ದವು.
SCROLL FOR NEXT