ನವದೆಹಲಿ: ಹಗರಣಗಳನ್ನು ಬಯಲಿಗೆಳೆಯುವುದಕ್ಕೆ ಖ್ಯಾತರಾಗಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಕಣ್ಣು ಈಗ ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಮೇಲೆ ಬಿದ್ದಿದ್ದು, ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆಯುತ್ತಿರುವುದರಲ್ಲಿ ಹಗರಣ ನಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದಲ್ಲಿ ಯಾರಾದರೂ ಅಕ್ರಮವೆಸಗಿರುವುದು ಕಂಡುಬಂದರೆ ಅವರ ವಿರುದ್ಧ ಖಾಸಗಿಯಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ನಾಗರಿಕ ವಿಮಾನಯಾನ ಖಾತೆ ಏರ್ ಇಂಡಿಯಾದಿಂದ ಶೇ.76 ರಷ್ಟು ಬಂಡವಾಳ ಹಿಂತೆಗೆತವನ್ನು ಘೋಷಿಸುತ್ತಿದ್ದಂತೆಯೇ ಸುಬ್ರಹ್ಮಣಿಯನ್ ಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆಯನ್ನು ಈ ಹಿಂದೆಯೂ ಪ್ರಶ್ನಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಅಗತ್ಯತೆಯನ್ನು ಈ ಹಿಂದೆಯೂ ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics