ದೆಹಲಿಯಲ್ಲಿ ಇನ್ಮುಂದೆ ಯೂರೋ-VI ಪೆಟ್ರೋಲ್, ಡೀಸಲ್; ದೇಶದಲ್ಲೇ ಮೊದಲ ನಗರ
ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಜಧಾನಿ ದೆಹಲಿಯಲ್ಲಿ ನಾಳೆಯಿಂದ ಯಾವುದೇ ಹೆಚ್ಚುವರಿ ಬೆಲೆ ...
ನವದೆಹಲಿ: ವಾಯುಮಾಲಿನ್ಯವನ್ನು ನಿಯಂತ್ರಿಸಲು ರಾಜಧಾನಿ ದೆಹಲಿಯಲ್ಲಿ ನಾಳೆಯಿಂದ ಯಾವುದೇ ಹೆಚ್ಚುವರಿ ಬೆಲೆ ವಿಧಿಸದೆ ಅಲ್ಟ್ರಾ ಕ್ಲೀನ್ ಯೂರೋ-VI ಹಂತದ ಪೆಟ್ರೋಲ್ ಮತ್ತು ಡೀಸೆಲ್ ನ್ನು ಪೂರೈಸಲಾಗುತ್ತದೆ.
ಯುರೊ-IV ನೇ ಹಂತದ ಪೆಟ್ರೋಲ್ ಮತ್ತು ಡೀಸೆಲ್ ನಿಂದ ಯುರೊ-5ನೇ ಹಂತಕ್ಕೆ ಬದಲಾಯಿಸುತ್ತಿರುವ ನಗರ ದೆಹಲಿ ದೇಶದಲ್ಲಿಯೇ ಮೊದಲಾಗಿದೆ.
ದೆಹಲಿಯಲ್ಲಿರುವ ನೊಯ್ಡಾ, ಗಜಿಯಾಬಾದ್, ಗುರುಗ್ರಾಮ್ ಮತ್ತು ಫರಿದಾಬಾದ್ ಮತ್ತು ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ ಮೊದಲಾದ 13 ನಗರಗಳು ಕೂಡ ಮುಂದಿನ ವರ್ಷ ಜನವರಿ 1ರಿಂದ ಯೂರೋ-VI ನೇ ಹಂತದ ಪೆಟ್ರೋಲ್, ಡೀಸೆಲ್ ಬಳಕೆಗೆ ವರ್ಗಾಯಿಸಲಿವೆ.
ದೇಶದ ಉಳಿದ ನಗರಗಳು 2020ರ ವೇಳೆಗೆ ಯೂರೋ-VI ನೇ ಹಂತದ ಪೆಟ್ರೋಲ್, ಡೀಸೆಲ್ ಗಳನ್ನು ಜಾರಿಗೆ ತರಲಿವೆ.
ದೇಶೀಯ ತೈಲ ಕಂಪೆನಿಗಳು ಬಿಎಸ್-VI( ಯೂರೋ-VI ಗೆ ಸಮನಾದ) ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ನಾಳೆಯಿಂದ ದೆಹಲಿ ಸುತ್ತಮುತ್ತ ಎಲ್ಲಾ 391 ಪೆಟ್ರೋಲ್ ಬಂಕ್ ಗಳಲ್ಲಿ ಪೂರೈಸಲಿವೆ ಎಂದು ಭಾರತೀಯ ತೈಲ ನಿಗಮದ ನಿರ್ದೇಶಕ ಬಿ.ವಿ.ರಾಮ ಗೋಪಾಲ್ ತಿಳಿಸಿದ್ದಾರೆ.
ತೈಲ ಕಂಪೆನಿಗಳು ಶುದ್ಧ ಇಂಧನ ಉತ್ಪಾದನೆಗೆ ಭಾರೀ ಹಣ ಹೂಡಿಕೆ ಮಾಡಿದ್ದರೆ ಇದರ ವೆಚ್ಚವನ್ನು ಗ್ರಾಹಕರ ಮೇಲೆ ಭರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ತಕ್ಷಣಕ್ಕೆ ಹೊರಿಸುವ ಯೋಜನೆಯಿಲ್ಲ ಎಂದು ರಾಮ್ ಗೋಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಣದ ವಿಷಯದಲ್ಲಿ ಶುದ್ಧ ಇಂಧನಕ್ಕೆ ಲೀಟರ್ ಗೆ 50 ಪೈಸೆ ಹೆಚ್ಚುವರಿಯಾಗುತ್ತದೆ.