ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಆರ್ ಎಸ್ಎಸ್ ಯಾರನ್ನೂ ಬಹಿಷ್ಕರಿಸುವುದಿಲ್ಲ: ಭಾಗ್ವತ್
ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಸಂಘಪರಿವಾರ ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಆರ್ ಎಸ್ ಎಸ್ ನ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಪುಣೆ: ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಸಂಘಪರಿವಾರ ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಆರ್ ಎಸ್ ಎಸ್ ನ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಮುಕ್ತ ಮಾಡುವುದು ರಾಜಕೀಯ ಭಾಷೆ, ನಾವು ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಭಾಗ್ವತ್ ಹೇಳಿದ್ದಾರೆ. ಪುಣೆಯಲ್ಲಿ ಐಎಫ್ಎಸ್ ಅಧಿಕಾರಿಯೊಬ್ಬರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಮೋಹನ್ ಭಾಗ್ವತ್, ನಮ್ಮನ್ನು ವಿರೋಧಿಸುವವರನ್ನೂ ಸೇರಿದಂತೆ ರಾಷ್ಟ್ರ ನಿರ್ಮಾಣದ ಕೆಲಸಕ್ಕಾಗಿ ಒಗ್ಗಟ್ಟಿನಿಂದ ಮುಂದಡಿ ಇಡಬೇಕಾಗುತ್ತದೆ. ನಾವು ಯಾರನ್ನೂ ಬಹಿಷ್ಕರಿಸುವುದಿಲ್ಲ ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ ಎಂದು ಭಾಗ್ವತ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.