ದೇಶ

ಭಾರತದ 10 ನಗರಗಳಲ್ಲಿ ಆಫ್ ಲೈನ್ ವಹಿವಾಟನ್ನು ವಿಸ್ತರಿಸಲಿರುವ ಒನ್ ಪ್ಲಸ್ ಮೊಬೈಲ್ ಸಂಸ್ಥೆ

Srinivas Rao BV
ನವದೆಹಲಿ: ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಚೀನಾ ಮೂಲದ ಒನ್ ಪ್ಲಸ್ ಮೊಬೈಲ್ ಸಂಸ್ಥೆ ಭಾರತದ 10 ಪ್ರಮಿಖ ನಗರಗಳಲ್ಲಿ ಆಫ್ ಲೈನ್ ವಹಿವಾಟನ್ನು ವಿಸ್ತರಿಸಲಿದೆ. 
ವರ್ಷಾಂತ್ಯಕ್ಕೆ 10 ನಗರಗಳಲ್ಲಿ ಆಫ್ ಲೈನ್ ವಹಿವಾಟನ್ನು ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿದೆ. 
ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇ.47.3 ರಷ್ಟನ್ನು ಒನ್ ಪ್ಲಸ್ ಸಂಸ್ಥೆ, ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್  (ಐಡಿಸಿ) ಯ ಪ್ರಕಾರ ಈ ವರೆಗೂ 287,000 ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡಿದೆ. 
ಆಫ್ ಲೈನ್ ಮಾರಾಟದೊಂದಿಗೆ ಆನ್ ಲೈನ್ ಮಾರಾಟದ ಪಾಲುದಾರ ಅಮೇಜಾನ್ ಇಂಡಿಯಾ ಜೊತೆಗೂ ಒನ್ ಪ್ಲಸ್ ಸಂಸ್ಥೆಯ ಮೊಬೈಲ್ ಫೋನ್ ಗಳ ಮಾರಾಟವನ್ನು ಮುಂದುವರೆಸುವುದಾಗಿ ಒನ್ ಪ್ಲಸ್ ಸಂಸ್ಥೆ ತಿಳಿಸಲಿದೆ. 
SCROLL FOR NEXT