ದೇಶ

ಮುಂಬೈ: ಪತ್ನಿಯ ಕಿರುಕಳದಿಂದ ಬೇಸತ್ತ ಪತಿಗೆ ವಿಚ್ಚೇದನದೊಡನೆ 50 ಸಾವಿರ ಪರಿಹಾರ

Raghavendra Adiga
ಮುಂಬೈ: ಸುಳ್ಳು ವರದಕ್ಷಿಣೆ ಪ್ರಕರಣ, ಕಿರುಕುಳ, ಕ್ರಿಮಿನಲ್ ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿದ್ದ ಪತ್ನಿಯೊಬ್ಬಳಿಂದ ಅಮಾಯಕ ಪತಿಗೆ ಬಾಂಬೆ ಹೈಕೋರ್ಟ್ ಬಿಡುಗಡೆ ನೀಡಿದೆ. ಜತೆಗೆ  50,000 ರೂ. ಪರಿಹಾರವನ್ನೂ ಒದಗಿಸಿದೆ.
ಉದ್ಯಮಿಯಾಗಿದ್ದ  ಪತಿಯ ತಾಯಿಗೆ ಕ್ಯಾನ್ಸರ್ ಇದ್ದು ಆಕೆಗೆ ನಿತ್ಯವೂ ನಾನಾ ಬಗೆಯ ಕಷ್ಟಗಳನ್ನು ನೀಡುತ್ತಿದ್ದ ಪತ್ನಿಯಿಂದ ಬಿಡುಗಡೆ ಕೋರಿ ಪತಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು.
ಕಮಲ್ ಕಿಶೋರ್ ತಾತೇಡ್ ಮತ್ತು ಬರ್ಗೆಸ್ ಕೊಲಬವಲ್ಲಾ  ಅವರನ್ನೊಳಗೊಂಡ ಪೀಠವು  ಕ್ರೌರ್ಯದ ಆಧಾರದ ಮೇಲೆ ಹಿಂದೂ ವಿವಾಹ ಕಾಯಿದೆಯಡಿ ಪ್ರಕರಣದ ವಿಚಾರಣೆ ನಡೆಸಿ ವಿಚ್ಚೇದನ ನಿಡಿದೆ. ಅಲ್ಲದೆ ವಿಚ್ಚೇದನಕ್ಕೆ ತಡೆ, ಪತ್ನಿಗೆ ಜೀವನ ನಿರ್ವಹಣಾ ವೆಚ್ಚವಾಗಿ ಮಾಸಿಕ 15,000 ರೂ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು  ತಳ್ಳಿ ಹಾಕಿದೆ.
ಆದರೆ ಪತ್ನಿಯ ಜತೆಗೆ ವಾಸಿಸುವ ಮಗನ ನಿರ್ವಹಣೆಗೆ ವೆಚ್ಚ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. 
"ಪ್ರಕರಣವನ್ನು ಸರಿಯಾಗಿ ವಿಮರ್ಶಿಸದೆ ಕೆಳ ನ್ಯಾಯಾಲಯವು ತಪ್ಪಾಗಿ ತೀರ್ಪು ನೀಡಿಎ" ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
SCROLL FOR NEXT