ನವದೆಹಲಿ: "ನಾನು ಕೆಲಸಗಾರನೇ ಹೊರತು ಸಾಮ್ರಾಟನಲ್ಲ" ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ರೂ. 48 ಕೋಟಿ ಫ್ಲ್ಯಾಶ್ ನೆಟ್ ಹಗರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರೈಲ್ವೆ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಪಿಯೂಶ್ ಗೋಯಲ್ ಈ ಪ್ರತಿಕ್ರಿಯೆ ನಿಡಿದ್ದಾರೆ.
"2014 ರ ಮೇ 26ಕ್ಕೆ , ನಾನು ಕೇಂದ್ರ ಮಂತ್ರಿಯಾಗುವದಕ್ಕೆ ಮುನ್ನ ನಾನು ವೃತ್ತಿಪರ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಬ್ಯಾಂಕ್ ಹೂಡಿಕೆಯ ಸಲಹೆಗಾರನಾಗಿದ್ದೆ. ನಾನು ನಿಮ್ಮಂತೆ (ರಾಹುಲ್ ಗಾಂಧಿ) ಕೆಲಸ ಮಾಡದೆ ಬದುಕುವ ಕಲೆಯನ್ನು ಕರಗತ ಮಾಡಿಕೊಂಡಿಲ್ಲ. ನಾನೊಬ್ಬ ಕೆಲಸಗಾರನೇ ಹೊರತು ಸಾಮ್ರಾಟನಲ್ಲ" ಪಿಯೂಶ್ ಗೋಯಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಗೋಯಲ್ ವಿದ್ಯುತ್ ಕ್ಷೇತ್ರದ ಸಂಥೆ ಪರಿಮಳ ಗ್ರೂಪ್ ಗೆ ಫ್ಲ್ಯಾಶ್ ನೆಟ್ ಇನ್ಪೋ ಸೊಲ್ಯೂಷನ್ ನ ಸ್ಟಾಕ್ ಗಳನ್ನು 1,000 ಪಟ್ಟು ಹೆಚ್ಚಿನ ಮುಖಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಇಂದು ಬೆಳಿಗ್ಗೆ ರಾಹುಲ್ ಗಾಂಧಿ ಗೋಯಲ್ ವಿರುದ್ದ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದರು.
ಗೋಯಲ್ ವಿದ್ಯುತ್ ಖಾತೆ ರಾಜ್ಯ ಸಚಿವರಾಗಿದ್ದ ವೇಳೆ ಈ ಪ್ರಕರಣ ನಡೆದಿದೆ ಎಂದು ರಾಹುಲ್ ಉಲ್ಲೇಖಿಸಿದ್ದರು.