ವೇತನ ಸಂಹಿತೆ ಮಸೂದೆಯ ಅಂಶಗಳಿಗೆ ಕಾಂಗ್ರೆಸ್ ವಿರೋಧ: ಸಮಗ್ರ ಕಾನೂನಿಗೆ ಒತ್ತಾಯ
ನವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ ಮಾನದಂಡವನ್ನು ನಿಗದಿಪಡಿಸಲು ಸಾಧ್ಯವಾಗು ವೇತನ ಸಂಹಿತೆ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
ಮಸೂದೆಯಲ್ಲಿನ ಅಂಶಗಳನ್ನು ಪರಿಶೀಲಿಸಲು ನೀಡಲಾಗಿದ್ದ ಸಮಿತಿಯ ವರದಿ ಅಂತಿಮಗೊಂಡಿರುವುದರ ಬೆನ್ನಲ್ಲೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗಿದ್ದು, ಏಕಕಾಲಿಕ ಪೀಳಿಗೆ ಹಾಗೂ ಅವರಿಗೆ ಯೋಗ್ಯ ಉದ್ಯೋಗದ ರಕ್ಷಣೆಯ ಭರವಸೆಯ ಅಂಶಗಳಿಲ್ಲದೇ ಮಸೂದೆ ಅಪೂರ್ಣವಾಗಲಿದೆ ಎಂದು ಕಾಂಗ್ರೆಸ್ ವಾದಿಸಿದೆ.
ಪ್ರಸ್ತಾವಿತ ಸಂಹಿತೆಗೆ ಕಾಂಗ್ರೆಸ್ ಏ.30 ರಂದೇ ಕಾರ್ಮಿಕ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಗೆ ಆಕ್ಷೇಪಣೆ ಸಲ್ಲಿಸಿದ್ದು, ಅಸಂಘಟಿತ ವಲಯದ ಬೇಡಿಕೆಗಳಿಗೆ ಸಂಹಿತೆಯಲ್ಲಿ ಗಮನ ಹರಿಸಲಾಗಿಲ್ಲ, ಆದ್ದರಿಂದ ಸಮಗ್ರವಾದ ಮಸೂದೆ ಜಾರಿಗೆ ಬರಬೇಕೆಂದು ಸಚಿವರಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.
2 ನೇ ಕಾರ್ಮಿಕ ಆಯೋಹ ಹಾಗೂ ಅನೌಪಚಾರಿಕ ವಲಯದಲ್ಲಿ ಉದ್ಯಮಗಳ ರಾಷ್ಟ್ರೀಯ ಯೋಗದ ಶಿಫಾರಸ್ಸುಗಳ ಪ್ರಕಾರವಾಗಿ ಅಸಂಘಟಿತ ವಲಯದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಗ್ರವಾದ ಕಾನೂನು ಜಾರಿಯಾಗಬೇಕು ಎಂದು ಭಾರತ ಅಸಂಘಟಿತ ನೌಕರರ ಕಾಂಗ್ರೆಸ್ ನ ಅಧ್ಯಕ್ಷ ಅರವಿಂದ್ ಸಿಂಗ್ ಹೇಳಿದ್ದಾರೆ.
ಭಾರತ ಅಸಂಘಟಿತ ನೌಕರರ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಅಂಗವಾಗಿದ್ದು, ಇತ್ತೀಚಿಗೆಷ್ಟೇ ರಾಹುಲ್ ಗಾಂಧಿ ಈ ಸಂಘಟನೆಯನ್ನು ಉದ್ಘಾಟಿಸಿದ್ದರು.