ತನಿಯಾ ಖನ್ನಾ 
ದೇಶ

ದೆಹಲಿ: ಕಾರು ಚರಂಡಿಗೆ ಬಿದ್ದು ರೇಡಿಯೋ ಮಿರ್ಚಿ ಉದ್ಯೋಗಸ್ಥೆ ಸಾವು

ಕಾರು ಚರಂಡಿಯಲ್ಲಿ ಮುಳುಗಿ 26 ವರ್ಷದ ರೇಡಿಯೊ ಮಿರ್ಚಿಯಲ್ಲಿ ನೌಕರರಾಗಿದ್ದ 26 ವರ್ಷದ ಮಹಿಳೆ ...

ನವದೆಹಲಿ: ಕಾರು ಚರಂಡಿಯಲ್ಲಿ ಮುಳುಗಿ 26 ವರ್ಷದ ರೇಡಿಯೊ ಮಿರ್ಚಿಯಲ್ಲಿ ನೌಕರರಾಗಿದ್ದ 26 ವರ್ಷದ ಮಹಿಳೆ ಮೃತಪಟ್ಟಿರುವ ಘಟನೆ ದೆಹಲಿ ಸಮೀಪ ನೊಯ್ಡಾದಲ್ಲಿ ಕಳೆದ ರಾತ್ರಿ ನಡೆದಿದೆ.

ದೆಹಲಿಯಲ್ಲಿ ರೇಡಿಯೋ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ತನಿಯಾ ಖನ್ನಾ ಮಧ್ಯರಾತ್ರಿ ಹೊತ್ತಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಕಾರು ಚಲಾಯಿಸಿಕೊಂಡು ಹಿಂತಿರುಗುತ್ತಿದ್ದಾಗ ತೆರೆದ ಚರಂಡಿ ಸಿಲುಕಿ ಕಾರಿನ ನಿಯಂತ್ರಣ ಕಳೆದುಕೊಂಡರು. ಇದರಿಂದ ಕಾರು ಅಪಘಾತಕ್ಕೀಡಾಗಿ ತನಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ದುರ್ಘಟನೆ ನೊಯ್ಡಾ ವಲಯ 94ರಲ್ಲಿ ನಡೆದಿದೆ.

ತನಿಯಾ ಖನ್ನಾ ರೇಡಿಯೊ ಮಿರ್ಚಿಯ ಮಾರ್ಕೆಟಿಂಗ್ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ವೇಗವಾಗಿ ಬರುತ್ತಿದ್ದ ಕಾರು ತೆರೆದ ಚರಂಡಿಗೆ ಹೋಗಿ ಢಿಕ್ಕಿ ಹೊಡೆದಾಗ ದಾರಿಹೋಕರು ತಕ್ಷಣವೇ ಪೊಲೀಸರಿಗೆ ಸುದ್ದಿ ತಲುಪಿಸಿದರು. ತನಿಯಾ ಮೃತದೇಹವನ್ನು ಇಂದು ಬೆಳಗ್ಗೆ ಹೊರತೆಗೆಯಲಾಗಿದ್ದು ಹತ್ತಿರದ ಆಸ್ಪತ್ರೆಗೆ ಶವಪರೀಕ್ಷೆಗೆ ಕೊಂಡೊಯ್ಯಲಾಯಿತು.
ಪೊಲೀಸರು ತನಿಯಾ ಕುಟುಂಬಸ್ಥರಿಗೆ ವಿಷಯ ತಲುಪಿಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ