ದೇಶ

2019ರ ಪದ್ಮ ಪ್ರಶಸ್ತಿ : ಕೇಂದ್ರಸರ್ಕಾರದಿಂದ ನಾಮನಿರ್ದೇಶನ, ಶಿಫಾರಸ್ಸಿಗಾಗಿ ಆಹ್ವಾನ

Nagaraja AB

ನವದೆಹಲಿ :  2019 ನೇ ಸಾಲಿನ ಪದ್ಮ  ಪ್ರಶಸ್ತಿಗಾಗಿ ನಾಮನಿರ್ದೇಶನ,  ಹಾಗೂ ಶಿಫಾರಸ್ಸುಗಳ ಆನ್ ಲೈನ್ ನೋಂದಣಿ  ಪ್ರಕ್ರಿಯೆ ಆರಂಭಗೊಂಡಿದೆ.

 2019ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಿರುವ ಪದ್ಮ ಪ್ರಶಸ್ತಿಗಾಗಿ ಮೇ 1 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸೆಪ್ಟೆಂಬರ್ 15 , 2018 ಕೊನೆಯ ದಿನವಾಗಿದೆ.

ಭಾರತ ರತ್ನ ಮತ್ತು ಪದ್ಮ ವಿಭೂಷ ಪ್ರಶಸ್ತಿಗಾಗಿ  ಕೇಂದ್ರ ಸಚಿವರು, ಇಲಾಖೆಗಳು, ರಾಜ್ಯ ಮತ್ತು ಕೇಂದ್ರಾಡಳಿತ   ಪ್ರದೇಶಗಳ ಸರ್ಕಾರಗಳು ನಾಮ ನಿರ್ದೇಶನ ಮಾಡಬಹುದಾಗಿದೆ.

  ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ ಆರ್ಹರಿಗೆ ಪ್ರಶಸ್ತಿ ಸಂದುವತೆ ಮಾಡಬೇಕಿದೆ ಎಂದು ಗೃಹ ಸಚಿವಾಲಯ ಏ.25 ರಂದು ಮನವಿ ಮಾಡಿತ್ತು. ಪದ್ಮ ಪ್ರಶಸ್ತಿಗಾಗಿ  ಆನ್ ಲೈನ್ ನಲ್ಲಿ ನಾಮನಿರ್ದೇಶನ, ಅಥವಾ ಶಿಫಾರಸ್ಸು ಮಾಡಬಹುದಾಗಿದೆ. www.padmaawards.gov.in ನಲ್ಲಿ ದೇಶದ ಎಲ್ಲಾ ನಾಗರಿಕರು ನಾಮನಿರ್ದೇಶನ ಮಾಡಬಹುದಾಗಿದ.

ವೆಬ್ ಸೈಟ್ ನಲ್ಲಿ ತಿಳಿಸಿರುವಂತೆ ನಾಮನಿರ್ದೇಶನಗೊಂಡಿರುವ ಸೂಕ್ತ ಮಾಹಿತಿಯನ್ನೊಂದಿರಬೇಕಾಗುತ್ತದೆ.  ಅವರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿನ ಸಾಧನೆ ಬಗ್ಗೆಯೂ  ಮಾಹಿತಿ ಇರಬೇಕಾಗುತ್ತದೆ.  

 ಪದ್ಮ , ಪದ್ಮ ವಿಭೂಷ, ಪದ್ಮ ಭೂಷಣ, ಪದ್ಮಶ್ರೀ  ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿದ್ದು, ಪ್ರತಿವರ್ಷದ ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡುತ್ತಾ ಬರಲಾಗಿದೆ.

 ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಔಷಧೀಯ , ನಾಗರೀಕ , ವಿಜ್ಞಾನ ಮತ್ತು ತಂತ್ರಜ್ಞಾನ, ಸಾರ್ವಜನಿಕ ವ್ಯವಹಾರ,  ವ್ಯಾಪಾರ ಮತ್ತು ಉದ್ದಿಮೆ ಮತ್ತಿತರ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಪರಿಶಿಷ್ಟ ಜಾತಿ, ಪಂಗಡ,  ದಿವ್ಯಾಂಗರು , ಮಹಿಳೆಯರು ಮತ್ತಿತರ ಸಮಾಜದ ದುರ್ಬಲ ವರ್ಗದ ಪ್ರತಿಭಾವಂತರನ್ನು ನಾಮನಿರ್ದೇಶನ ಮಾಡುವಂತೆ  ಗೃಹ ಸಚಿವಾಲಯ ಮನವಿ ಮಾಡಿಕೊಂಡಿದೆ.



SCROLL FOR NEXT