ದೇಶ

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಹೇಳಿಕೆ ತಿರುಚಿದ ಮಾಧ್ಯಮಗಳು!

Srinivas Rao BV
ಅಗರ್ತಲಾ: ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತ್ರಿಪುರಾ ಸಿಎಂ ಬಿಪ್ಲಬ್ ದೇವ್ ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳ ವರದಿಯಲ್ಲಿ ತಿರುಚಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ. 
ಕೆಲವು ಪತ್ರಿಕೆಗಳ ವರದಿಯ ಪ್ರಕಾರ ತ್ರಿಪುರಾ ಸಿಎಂ ಬಿಪ್ಲಬ್ ದೇವ್ " ಈಗಿನ ಕಾಲದಲ್ಲಿ ಮ್ಯಾನ್ಮಾರ್, ಜಪಾನ್, ಟಿಬೆಟ್ ಎಂದು ಕರೆಯಲಾಗುತ್ತಿರುವ ಪ್ರದೇಶಗಳೂ ಸೇರಿ ಭಾರತದಾದ್ಯಂತ ಸಂಚರಿಸಿದ್ದ ಬುದ್ಧ ಶಾಂತಿ, ಸೌಹಾರ್ದತೆ, ಸಮೃದ್ಧಿಯ ಸಂದೇಶವನ್ನು ಸಾರಿದ್ದ" ಎಂದು ಹೇಳಿದ್ದರು. ಆದರೆ ಈ ವರದಿಯಲ್ಲಿ ಸಿಎಂ ಹೇಳಿಕೆಯನ್ನು ಯಥಾವತ್ ವರದಿ ಮಾಡದೇ ತಿರುಚಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 
ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಪ್ಲಬ್ ದೇವ್,  ಬುದ್ಧ ಭಾರತದಾದ್ಯಂತ  ಸುತ್ತಿ, ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದ್ದರು, ಅದೇ ಸಂದೇಶ ಇಂದಿನ ಮ್ಯಾನ್ಮಾರ್ , ಜಪಾನ್, ಟಿಬೆಟ್ ಗಳನ್ನೂ ತಲುಪಿದೆ" ಎಂದು ಹೇಳಿದ್ದರು. ಆದರೆ ಈ ಹೇಳಿಕೆ ಕೆಲವು ಪತ್ರಿಗೆಳಲ್ಲಿ ಸರಿಯಾಗಿ ವರದಿಯಾಗಿಲ್ಲ ಎಂದು ಸಿಎಂ ಕಚೇರಿ ಹೇಳಿದೆ. 
ಮುಖ್ಯಮಂತ್ರಿಗಳ ಹೇಳಿಕೆಯನ್ನು ತಿರುಚಿರುವುದು ಸ್ಪಷ್ಟವಾಗಿದೆ ಎಂದು ತ್ರಿಪುರಾ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮಿಲಿಂದ್ ರಾಮ್ಟೆಕೆ ಹೇಳಿದ್ದಾರೆ. 
SCROLL FOR NEXT