ಸಾಂದರ್ಭಿಕ ಚಿತ್ರ 
ದೇಶ

ಕನಸಿನಲ್ಲಿ ದೆವ್ವದ ಕಾಟ ತಪ್ಪಿಸಲು 3 ವರ್ಷದ ಮಗುವನ್ನು ಬಲಿ ನೀಡಿದ ಮಹಿಳೆ!

ತನ್ನ ಕನಸಿನಲ್ಲಿ ಬರುವ ದೆವ್ವಗಳನ್ನು ಕೊನೆಗಾಣಿಸಲು ಮಹಿಳೆಯೊಬ್ಬಳು 3 ವರ್ಷದ ಬಾಲಕಿಯನ್ನು ಬಲಿಕೊಟ್ಟ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.

ಚಂಡಿಗಢ: ತನ್ನ ಕನಸಿನಲ್ಲಿ ಬರುವ ದೆವ್ವಗಳನ್ನು ಕೊನೆಗಾಣಿಸಲು ಮಹಿಳೆಯೊಬ್ಬಳು 3  ವರ್ಷದ ಬಾಲಕಿಯನ್ನು ಬಲಿಕೊಟ್ಟ ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಯಮುನಾನಗರ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬಲಿಯಾದ ಮಗು ಆರೋಪಿ ಮಹಿಳೆಯ ಸಂಬಂಧಿಗಳದಾಗಿತ್ತು ಎನ್ನಲಾಗಿದೆ. 
ಮಹಿಳೆಗೆ ರಾತ್ರಿ ಕನಸಿನಲ್ಲಿ ದೆವ್ವಗಳು ಹಿಡಿದುಕೊಂಡಂತೆ ಆಗುತ್ತಿತ್ತು. ಪ್ರತಿ ಬಾರಿ ಈ ಕನಸು ಬೀಳುತ್ತಾ ಮಹಿಳೆ ಭಯ ಭೀತಳಾಗುತ್ತಿದ್ದಳು. ಅದೇ ಕನಸಿನಲ್ಲಿ ಒಮ್ಮೆ ಇಂತಹಾ ಕನಸು ಬರದೆ ಹೋಗಲು ಬಾಲಕಿಯನ್ನು ಬಲಿ ನೀಡಬೇಕೆಂದು ಸೂಚನೆಯಾಗಿತ್ತು. ಇದಕ್ಕಾಗಿ ನಾನು ಮಗುವನ್ನು ಕೊಂದದ್ದಾಗಿ ಮಹಿಳೆ ಪೋಲೀಸರೆದುರು ಒಪ್ಪಿಕೊಂಡಿದ್ದಾಳೆ.
ಶನಿವಾರ ರಾತ್ರಿ ಮಹಿಳೆಯು ಬಾಲಕಿಯನ್ನು ದೇವರ ಕೋಣೆಗೆ ಕರೆತಂದಿದ್ದಾಳೆ. ಅಲ್ಲಿ ಚಾಕುವಿನಿಂದ ಮಗುವಿನ ಕತ್ತು ಸೀಳಿದ್ದಾಳೆ. ಆಗ ನೋವಿನಿಂದ ಮಗು ಜೋರಾಗಿ ಕಿರುಚಿದೆ. ಮಗು ಕಿರುಚುವ ಶಬ್ದ ಕೇಳಿ ಅಕ್ಕ ಪಕ್ಕದ ಮನೆಯವರು ಓಡಿ ಬಂದಾಗ ಕೃತ್ಯ ಬಯಲಾಗಿದೆ.
ತಕ್ಷಣ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ ಚಿಕಿತ್ಸೆ ಫಲ ನೀಡದೆ ಮಗು ಮರಣಹೊಂದ್ದೆ ಎಂದು ಪೋಲೀಸರು ಹೇ:ಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!