ಕಣ್ಣೂರು: ಸಿಪಿಐ-ಎಂ ಕಾರ್ಯಕರ್ತನ ಹತ್ಯೆ; ಪ್ರತೀಕಾರದಲ್ಲಿ ಆರ್ ಎಸ್ಎಸ್ ಕಾರ್ಯಕನ ಕೊಲೆ 
ದೇಶ

ಕಣ್ಣೂರು: ಸಿಪಿಐ-ಎಂ ಕಾರ್ಯಕರ್ತನ ಹತ್ಯೆ; ಪ್ರತೀಕಾರದಲ್ಲಿ ಆರ್ ಎಸ್ಎಸ್ ಕಾರ್ಯಕನ ಕೊಲೆ

ಕೇರಳದ ಕಣ್ಣೂರಿನಲ್ಲಿ ಮತ್ತೆ ಸೈದ್ಧಾಂತಿಕ, ರಾಜಕೀಯ ವಿಷಯಕ್ಕಾಗಿ ಹತ್ಯೆಗಳು ನಡೆದಿದ್ದು, ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಆರ್ ಎಸ್ಎಸ್ ಕಾರ್ಯಕರ್ತನನ್ನು ಹತ್ಯೆ

ನವದೆಹಲಿ: ಕೇರಳದ ಕಣ್ಣೂರಿನಲ್ಲಿ ಮತ್ತೆ ಸೈದ್ಧಾಂತಿಕ, ರಾಜಕೀಯ ವಿಷಯಕ್ಕಾಗಿ ಹತ್ಯೆಗಳು ನಡೆದಿದ್ದು, ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಆರ್ ಎಸ್ಎಸ್ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. 
ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಆರ್ ಎಸ್ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಗೊಳಗಾಗಿದ್ದ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ತನ್ನ ಕಾರ್ಯಕರ್ತ, ಮಾಜಿ ಕೌನ್ಸಿಲರ್ ಕೆ ಬಾಬು ಹತ್ಯೆ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಪಿಐಎಂ, ಆರ್ ಎಸ್ ಎಸ್ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರವನ್ನು ನಿಲ್ಲಿಸಲು ಸಿದ್ಧವಿಲ್ಲ ಎಂದು ಆರೋಪಿಸಿದೆ. 
ಬಾಬು ಹತ್ಯೆಯನ್ನು ಖಂಡಿಸಿ ಸಿಪಿಐಎಂ ಕಣ್ಣೂರು ಬಂದ್ ಗೆ ಕರೆ ನೀಡಿದೆ. ಇದೇ ವೇಳೆ ಮತ್ತೊಂದು ಘಟನೆಯಲ್ಲಿ ಆರ್ ಎಸ್ಎಸ್ ನಾಯಕ ಶನೋಜ್ ಎಂಬಾತ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆರ್ ಎಸ್ಎಸ್ ಕಾರ್ಯಕರ್ತನ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಾಧಿಗಳಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ