ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆ ಶೀಘ್ರವೇ ಪ್ರಧಾನಿ ಮೋದಿಯಿಂದ ಉದ್ಘಾಟನೆ 
ದೇಶ

ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆ ಶೀಘ್ರವೇ ಪ್ರಧಾನಿ ಮೋದಿಯಿಂದ ಉದ್ಘಾಟನೆ

ಅಸ್ಸಾಂ ನ ಡಿಬ್ರುಘರ್ ನಿಂದ ಅರುಣಾಚಲ ಪ್ರದೇಶದ ಪ್ಯಾಸಿಘಾಟ್ ಗೆ ಸಂಪರ್ಕ ಕಲ್ಪಿಸುವ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆಯನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

ಬೋಗಿಬೀಲ್: ಅಸ್ಸಾಂ ನ ಡಿಬ್ರುಘರ್ ನಿಂದ ಅರುಣಾಚಲ ಪ್ರದೇಶದ ಪ್ಯಾಸಿಘಾಟ್ ಗೆ ಸಂಪರ್ಕ ಕಲ್ಪಿಸುವ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆಯನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಚೀನಾ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಚಟುವಟಿಕೆಗಳಿಗೆ ಭಾರತದ ಅತಿ ಉದ್ದದ ರಸ್ತೆ-ರೈಲು ಸೇತುವೆ ಸಹಕಾರಿಯಾಗಲಿದ್ದು, ಜುಲೈ ವೇಳೆಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ.  ಸುಮಾರು 4.94 ಕಿಮೀಟರ್ ನಷ್ಟಿರುವ ಬೋಗಿಬೀಲ್ ರೈಲು ಹಾಗೂ ರಸ್ತೆ ಸೇತುವೆ ಎಂದೂ ಕರೆಯಲಾಗುವ ಸೇತುವೆಯನ್ನುವರ್ಷಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. 
ಏಷ್ಯಾದಲ್ಲೇ 2 ನೇ  ಅತ್ಯಂತ ಉದ್ದದ ಸೇತುವೆ ಇದಾಗಿದ್ದು, ಬೃಹತ್ ಯೋಜನೆಗಾಗಿ ರೂ.950 ಕೋಟಿ ಖರ್ಚು ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸೇನೆಪಡೆ ರವಾನಿಸಲು ಈ ಸೇತುವೆ ಅನುಕೂಲಕರವಾಗಿರಲಿದೆ.
1996 ರಲ್ಲೇ ಈ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿತ್ತಾದರೂ 2002 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗ ಕಾಮಗಾರಿ ಪ್ರಾರಂಭವಾಗಿತ್ತು.  2007 ರಲ್ಲಿ ಯುಪಿಎ ಸರ್ಕಾರ ಈ ಸೇತುವೆ ನಿರ್ಮಾಣ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ

‘Gen Z ಪ್ರತಿಭಟನೆಗಳಿಂದ ಮೋದಿ ಸರ್ಕಾರಕ್ಕೆ ನಡುಕ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ