ಗುಜರಾತ್ ಹೈಕೋರ್ಟ್ 
ದೇಶ

2002 ಗುಜರಾತ್ ಹಿಂಸಾಚಾರ: 14 ಮಂದಿಗೆ ಜೀವವಾಧಿ ಶಿಕ್ಷೆ, ನಾಲ್ವರು ನಿರ್ದೋಷಿ; ಹೈಕೋರ್ಟ್ ತೀರ್ಪು

2002 ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದ 14 ಮಂದಿ ಆರೋಪಿಗಳಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ನಾಲ್ವರನ್ನು ನಿರ್ದೋಷಿಗಳೆಂದು ಘೋಷಿಸಿದೆ.

ಅಹಮದಾಬಾದ್ : 2002 ರಲ್ಲಿ ಗುಜರಾತಿನಲ್ಲಿ  ಸಂಭವಿಸಿದ ಹಿಂಸಾಚಾರ ಪ್ರಕರಣದ 14 ಮಂದಿ ಆರೋಪಿಗಳಿಗೆ  ಗುಜರಾತ್ ಹೈಕೋರ್ಟ್  ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ನಾಲ್ವರನ್ನು ನಿರ್ದೋಷಿಗಳೆಂದು ಘೋಷಿಸಿದೆ.

 ಇದೇ ಪ್ರಕರಣದಲ್ಲಿ ಉಳಿದ ಏಳು ಮಂದಿಗೆ ಏಳು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಈ ಪ್ರಕರಣ ಸಂಬಂಧ 23  ಮಂದಿಯನ್ನು ಆರೋಪಿಗಳೆಂದು ವಿಶೇಷ  ವಿಚಾರಣಾ ನ್ಯಾಯಾಲಯ  ಘೋಷಿಸಿತ್ತು,

 ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಕರಣದ  ವಿಚಾರಣೆ ನಡೆಸಿದ್ದ  ನ್ಯಾಯಾಧೀಶರಾದ ಹರ್ಷ ದೇವಾನಿ ಮತ್ತು ಎ.ಎಸ್. ಸುಪೇಹಿಯಾ ಅವರನ್ನೊಳಗೊಂಡ ಪೀಠ, ಆದೇಶವನ್ನು ಕಾಯ್ದಿರಿಸಿತ್ತು.

2012ರಲ್ಲಿ ಎಸ್ ಐಟಿ  ವಿಶೇಷ ನ್ಯಾಯಾಲಯ 32 ಮಂದಿಗೆ  ಜೀವವಾಧಿ ಶಿಕ್ಷೆಯನ್ನು ಪ್ರಕಟಿಸಿತ್ತು. ಬಿಜೆಪಿಯ ಸಚಿವ ಮಾಯಾ ಕೊದನಾನಿ ಕೂಡಾ ಆರೋಪಿಯಾಗಿದ್ದು, 28 ವರ್ಷದ ಶಿಕ್ಷೆ ವಿಧಿಸಲಾಗಿತ್ತು. ಭಜರಂಗ ದಳದ ನಾಯಕ ಬಾಬು ಭಜರಂಗಿಗೆ ಸಾಯುವವರೆಗೂ ಜೈಲು ಶಿಕ್ಷೆ ಘೋಷಿಸಲಾಗಿತ್ತು.

ಇದನ್ನು ಹೊರತು ಪಡಿಸಿ  ಏಳು  ಮಂದಿ ಆರೋಪಿಗಳಿಗೆ  21 ವರ್ಷದ  ಜೈಲು ಶಿಕ್ಷೆ , ಉಳಿದವರಿಗೆ 14 ವರ್ಷದ ಸಾಜಾ  ಜೈಲು ಶಿಕ್ಷೆಯನ್ನು ನೀಡಲಾಗಿತ್ತು.ಎಲ್ಲಾ ಆರೋಪಿಗಳು ತಮ್ಮ ಅಪರಾಧದ ವಿರುದ್ಧ  ಹೈಕೋರ್ಟ್  ಗೆ ಮೇಲ್ಮನವಿ ಸಲ್ಲಿಸಿದ್ದರು.

2002 ಫೆಬ್ರವರಿ 27 ರಂದು ಗೋದ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 58 ಮಂದಿ ಜೀವ ಕಳೆದುಕೊಂಡಿದ್ದರು.

 ಈ ಪ್ರಕರಣ ಖಂಡಿಸಿ ಫೆ. 28 ರಂದು ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗ ನೀಡಿದ್ದ ಗುಜರಾತ್ ಬಂದ್  ವೇಳೆ ನರೋಡಾ ಪಾಟೀಯಾದಲ್ಲಿ   ಉದ್ರೀಕ್ತರು  97 ಮಂದಿ ಹತ್ಯೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT