ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ನೇತೃತ್ವದ ಸರ್ಕಾರದ ಭಾಗವಾಗಿರುವ ಬಿಜೆಪಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಏಕಪಕ್ಷೀಯ ಕದನ ವಿರಾಮಕ್ಕೆ ಕರೆ ನೀಡಿದ್ದ ಮುಫ್ತಿ ಹೇಳಿಕೆಯನ್ನು ವಿರೋಧಿಸಿದೆ.
ಮೆಹಬೂಬಾ ಮುಫ್ತಿ ಈ ಹೇಳಿಕೆಯ ಮೂಲಕ ಕಲ್ಲು ತೂರಾಟಗಾರರ ಪರ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಆರೋಪಿಸಿದೆ. ಮೆಹಬೂಬಾ ಮುಫ್ತಿ ಹೇಳುತ್ತಿರುವಂತೆ ಏಕಪಕ್ಷೀಯ ಕದನ ವಿರಾಮದ ಮೊರೆ ಹೋದರೆ ಅದು ಭಯೋತ್ಪಾದಕರಿಗಿರುವ ಒತ್ತಡ ಕಡಿಮೆ ಮಾಡಿದಂತಾಗುತ್ತದೆ. ಅವರಿಗೆ ಮತ್ತಷ್ಟು ಶಕ್ತಿ ಪಡೆಯುವುದಕ್ಕೆ ಸಹಕಾರಿಯಾಗುತ್ತದೆ ಎಂದು ಬಿಜೆಪಿ ವಕ್ತಾರರಾದ ಅರುಣ್ ಗುಪ್ತ ಹಾಗೂ ಸುನಿಲ್ ಸೇಥಿ ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿದಂತೆ ನೆನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಪರಿಸ್ಥಿತಿ ಸುಧಾರಣೆಗೆ ಅಟಲ್ ಬಿಹಾರಿ ವಾಜಪೇಯಿ ಅನುಸರಿಸಿದ್ದ ಮಾರ್ಗದಲ್ಲಿ ನಡೆದು ಏಕಪಕ್ಷೀಯ ಕದನ ವಿರಾಮಕ್ಕೆ ನಿರ್ಧಾರ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು ಆದರೆ ಈ ಅಭಿಪ್ರಾಯಕ್ಕೆ ಸಹಮತ ಮೂಡಲಿಲ್ಲ ಎಂದು ಬಿಜೆಪಿ ಹೇಳಿದೆ.
ಏಕಪಕ್ಷೀಯ ಕದನ ವಿರಾಮ ಉಲ್ಲಂಘನೆಗೆ ಮೆಹಬೂಬಾ ಮುಫ್ತಿ ನೀಡಿರುವ ಸಲಹೆ ರಾಷ್ಟ್ರದ ಹಿತಾಸಕ್ತಿಯ ಪರವಾಗಿಲ್ಲ ಎಂದು ಬಿಜೆಪಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics