ಪಿ ಚಿದಂಬರಂ 
ದೇಶ

ಕಪ್ಪು ಹಣ ಕಾಯ್ದೆಯಡಿ ಚಿದಂಬರಂ, ಸಂಬಂಧಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಐಟಿ

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಅವರ ಪತ್ನಿ ನಳನಿ, ಪುತ್ರ ಕಾರ್ತಿ ಹಾಗೂ...

ಚೆನ್ನೈ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಅವರ ಪತ್ನಿ ನಳನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ತಮ್ಮ ವಿದೇಶಿ ಆಸ್ತಿ ವಿವರ ಬಹಿರಂಗಪಡಿಸಿದ ಆರೋಪದ ಮೇಲೆ ಚಿದಂಬರಂ ಹಾಗೂ ಅವರ ಸಂಬಂಧಿಗಳ ವಿರುದ್ಧ ಕಪ್ಪು ಹಣ ಕಾಯ್ದೆ ಅಡಿ ನಾಲ್ಕು ಚಾರ್ಜ್ ಶೀಟ್ ಗಳನ್ನು ಐಟಿ ಅಧಿಕಾರಿಗಳು ಇಂದು ಚೆನ್ನೈ ವಿಶೇಷ ಕೋರ್ಟ್ ಸಲ್ಲಿಸಿದ್ದಾರೆ.
ಇಂಗ್ಲೆಂಡ್ ನ ಕೇಬ್ರಿಡ್ಜ್ ನಲ್ಲಿರುವ ಸುಮಾರು 5.37 ಕೋಟಿ ರುಪಾಯಿ ಮೌಲ್ಯದ ಸ್ಥಿರಾಸ್ತಿ, 80 ಲಕ್ಷ ರುಪಾಯಿ ಮೌಲ್ಯದ ಮತ್ತೊಂದು ಆಸ್ತಿ ಹಾಗೂ ಅಮೆರಿಕದಲ್ಲಿರುವ 3.28 ಕೋಟಿ ರುಪಾಯಿ ಮೌಲ್ಯದ ಆಸ್ತಿಯ ಭಾಗಶಃ ಅಥವಾ ಪೂರ್ಣ ವಿವರ ನೀಡದ ಆರೋಪದ ಮೇಲೆ ಚಿದಂಬರಂ, ನಳನಿ, ಕಾರ್ತಿ ಹಾಗೂ ಶ್ರೀನಿಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿದಂಬರಂ ಅವರು ವಿದೇಶದಲ್ಲಿರುವ ಈ ಆಸ್ತಿಗಳ ವಿವರವನ್ನು ತೆರಿಗೆ ಅಧಿಕಾರಿಗಳಿಗೆ ನೀಡದೆ ಕಪ್ಪು ಹಣ ತಡೆ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ವಿದೇಶದಲ್ಲಿ ರಹಸ್ಯವಾಗಿ ಅಕ್ರಮ ಸಂಪತ್ತು ಕೂಡಿಟ್ಟಿರುವ ಭಾರತೀಯರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಕಪ್ಪು ಹಣದ ವಿರುದ್ಧ ಕಾನೂನು ಅಭಿಯಾನವನ್ನು ಕೈಗೊಳ್ಳಲು ಈ ಕಾಯಿದೆ ಜಾರಿಗೆ ತಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 20 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು