ದೇಶ

ಬ್ರಿಟೀಷರ ವಿರುದ್ಧ ಪ್ರತಿಭಟಿಸಿ ಟಾಗೋರ್ ನೋಬೆಲ್ ಪ್ರಶಸ್ತಿ ಹಿಂತಿರುಗಿಸಿದ್ದರು: ತ್ರಿಪುರ ಸಿಎಂ ಬಿಪ್ಲಾಬ್ ಡೆಬ್

Raghavendra Adiga
ಅಗರ್ತಲಾ: ತ್ರಿಪುರ ಸಿಎಂ ಬಿಪ್ಲಾಬ್ ಕುಮಾರ್ ಡೆಬ್ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿ ಜನರನ್ನು ಗೆಲ್ಲುವುದಕ್ಕೆ ಬದಲು ತಮ್ಮ ಮೂರ್ಖತನದ ಹೇಳಿಕೆಗಳನ್ನು ನಿಡುತ್ತಾ ಸುದ್ದಿಯಾಗುತ್ತಿದ್ದಾರೆ.
ಇದೀಗ ಸಾಮಾಜಿಕ ಮಾದ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಒಂದರಲ್ಲಿ ಮುಖ್ಯಮಂತ್ರಿಗಳು ""ರವೀಂದ್ರನಾಥ್ ಠಾಗೋರ್ ಬ್ರಿಟಿಷರ ವಿರುದ್ಧ ಪ್ರತಿಭಟಿನೆ ಸಲ್ಲಿಸುವ ಕಾರಣ ತಮಗೆ ನೀಡಲಾಗಿದ್ದ ಸಾಹಿತ್ಯದ ನೋಬೆಲ್ ಪುರಸ್ಕಾರವನ್ನು ಹಿಂತಿರುಗಿಸಿದ್ದರು" ಎಂದಿದ್ದಾರೆ.
ರವೀಂದ್ರನಾಥ ಠಾಗೋರ್ ಜನ್ಮದಿನದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಡೆಬ್ ಈ ಹೇಳಿಕೆ ನಿಡಿದ್ದಾರೆ.
ನಿಜಸಂಗತಿ ಎಂದರೆ 1913 ರಲ್ಲಿ ಟಾಗೋರ್ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ಪಡೆದಿದ್ದರು.ಠಾಗೋರ್ ಸ್ವೀಡನ್ ನಿಂದ ಕೊಡಮಾಡುವ ಸಾಹಿತ್ಯದ ನೋಬೆಲ್ ಪುರಸ್ಕಾರವನ್ನು ಸ್ವೀಕರಿಸಿದ್ದರು. ಆದರೆ ತಮಗೆ ಸಂದಿದ್ದ ನೈಟ್ ಹುಡ್ ಬಿರುದನ್ನು 1919 ರ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಿ ಹಿಂದಿರುಗಿಸಿದ್ದರು.
ಇದಕ್ಕೂ ಹಿಂದೆ ತ್ರಿಪುರ ಮುಖ್ಯಮಂತ್ರಿಗಳು ಮಹಾಭಾರತ ಕಾಲದಲ್ಲಿ ಅಂತರ್ಜಾಲ ಮತ್ತು ಉಪಗ್ರಹ ಸಂವಹನ ಅಸ್ತಿತ್ವದಲ್ಲಿತ್ತು ಎಂದು ಹೇಳುವ ಮೂಲಕ ನಗೆಪಾತಲಿಗೀಡಾಗಿದ್ದರು. ಅಲ್ಲದೆ 1997ರಲ್ಲಿ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದ ಡಯಾನಾ ಹೇಡನ್ ಭಾರತದ ಐಶ್ವರ್ಯಾ ರೈ ನಷ್ಟು ಸುಂದರಿಯಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು.
ಇದೇ ಅಲ್ಲದೆ ಮೆಕಾನಿಕಲ್ ಇಂಜಿನಿಯರ್ ಗಳು ನಾಗರಿಕ ಸೇವೆಗಳಿಗೆ ಬರಬಾರದು, ಯುವಕರು ಹಸುವಿನ ಸಾಕಣೆಯಲ್ಲಿ ತೊಡಗಿಕೊಳ್ಳಬೇಕು, ಇಂತಹಾ ಅನೇಕ ಅನಪೇಕ್ಷಿತ ಹೇಳಿಕೆಗಳನ್ನು ಅವರು ನೀಡುತ್ತಾ ಬಂದಿದ್ದು ರಾಜಕೀಯ ವಲಯದಲ್ಲಿ ಬಿಜೆಪಿಗೆ ಇದು ಕಿರಿ ಕಿರಿಯನ್ನುಂಟು ಮಾಡಿದೆ.
SCROLL FOR NEXT