ಲಖನೌ: ದೆಹಲಿ ಬಳಿಕ ಉತ್ತರ ಪ್ರದೇಶಕ್ಕೆ ಧೂಳು ಸಹಿತ ಚಂಡಮಾರುತ ಅಪ್ಪಳಿಸಿದ್ದು, ಸಾವಿನ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದ ಎತಾವಾ ಜಿಲ್ಲೆಯಲ್ಲಿ 5 ಜನರು, ಮಥುರಾ, ಅಲೀಘರ್ ನಲ್ಲಿ 3 ಜನರು ಫಿರೋಜಾಬಾದ್ ನಲ್ಲಿ ಇಬ್ಬರು ಹಥ್ರಾಸ್ ಹಾಗೂ ಖಾನ್ ಪುರಗಳಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಚಂಡಮಾರುತಕ್ಕೆ 7 ಮನೆಗಳು ಹಾನಿಗೀಡಾಗಿದ್ದು, ಚಂಡಮಾರುತದ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿ 37 ಜಾನುವಾರುಗಳ ಹಿಂಡು ನಾಶವಾಗಿವೆ.
ಮತ್ತೊಂದು ಘಟನೆಯಲ್ಲಿ ಟ್ರಾಕ್ಟರ್ ಟ್ರಾಲಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದು, ಒಟ್ಟಾರೆ 18 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ತಲಾ 4 ಲಕ್ಷ ಪರಿಹಾರ ಘೋಷಣೆ ಮಾಡಿದೆ.