ದೇಶ

ನೀರಿನ ಟ್ಯಾಂಕರ್-ಆಟೋ ನಡುವೆ ಭೀಕರ ಅಪಘಾತ, 9 ಮಂದಿ ದುರ್ಮರಣ

Vishwanath S
ಔರಂಗಾಬಾದ್: ನೀರಿನ ಟ್ಯಾಂಕರ್ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದಾರೆ. 
ಮಹಾರಾಷ್ಟ್ರದ ಔರಂಗಾಬಾದ್ ನ ಫೈಥನ್ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನೀರಿನ ಟ್ಯಾಂಕರ್ ಹಾಗೂ ಆಟೋ ರಿಕ್ಷಾ ಮಧ್ಯೆ ಮುಖಾಮುಖಿಯಾಗಿ ಸಂಭವಿಸಿದ್ದು ಆಟೋದಲ್ಲಿದ್ದ ಒಂಬತ್ತು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಮೃತರನ್ನು ಶೇಖ್ ಮಸ್ಕೂದ್(22), ಶೇಕ್ ತ್ರಿಂಬಕ್, ಜನಾರ್ದನ ಅವಚರಮಲ್, ಎಸ್ ಠಾಕೂರ್, ಶ್ಯಾಮಕುಮಾರಿ ಠ್ಯಾಕೂರ್, ಇಬ್ಬರು ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ.
SCROLL FOR NEXT