ದೇಶ

'ಅಮ್ಮನ ದಿನ': ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್

Srinivasamurthy VN
ನವದೆಹಲಿ: ವಿಶ್ವ ತಾಯಂದಿರ ದಿನಾಚರಣೆಯನ್ನು ಖ್ಯಾತ ಸರ್ಚ್ ಎಂಜಿನ್ ವಿಶೇಷವಾಗಿ ಆಚರಿಸಿದ್ದು, ವಿಶೇಷ ಡೂಡಲ್ ಮೂಲಕ ಅಮ್ಮಂದಿರಿಗೆ ಶುಭಾಶಯ ಕೋರಿದೆ.
ಇಂದು ವಿಶ್ವ ತಾಯಂದಿರ ದಿನಾಚರಣೆಯ ಹಿನ್ನಲೆಯಲ್ಲಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡುಗಡೆ ಮಾಡಿದೆ. ಕೈಯಲ್ಲಿ ಬಿಡಿಸಿದ ಪುಟಾಣಿ ಡೈನಾಸರ್‌ ಹಾಗೂ ತಾಯಿ ಡೈನಾಸರ್‌ ಜತೆಯಲ್ಲಿರುವ ಚಿತ್ರವನ್ನು ಡೂಡಲ್‌ನಲ್ಲಿ ಚಿತ್ರಿಸಲಾಗಿದ್ದು, ಯಾವುದೇ ಫಾಲಾಪೇಕ್ಷೆ ಇಲ್ಲದೇ ತನ್ನ ಮಗುವನ್ನು ಲಾಲಿಸಿ, ಪಾಲಿಸಿ ಬೆಳೆಸುವ ತಾಯಿಯ ನಿಸ್ವಾರ್ಥ ಮನಸ್ಸಿಗೆ ಡೂಡಲ್‌ ಮೂಲಕ ಗೂಗಲ್ ಗೌರವ ಸೂಚಿಸಿದೆ.
ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನಾಚರಣೆ ಎಂದು ಆಚರಿಸುವ ಸಂಪ್ರದಾಯವನ್ನು ಅಮೆರಿಕದಲ್ಲಿ ಆರಂಭಿಸಲಾಯಿತು. ಇದನ್ನೇ ಮಿಕ್ಕೆಲ್ಲ ದೇಶಗಳು ಮುಂದಿನ ದಿನಗಳಲ್ಲಿ ಆರಂಭಿಸಿದವು. ಜಗತ್ತಿನ ವಿವಿಧ ಭಾಗಗಳಲ್ಲಿ ತಾಯಂದಿರ ದಿನಾಚರಣೆಯನ್ನು ವಿವಿಧ ದಿನಗಳಲ್ಲಿ ಆಚರಿಸಲಾಗುತ್ತಿದೆ. ಅದರಲ್ಲೂ ಮಾರ್ಚ್‌ ಹಾಗು ಮೇ ತಿಂಗಳುಗಳಲ್ಲಿ ಸಾಮಾನ್ಯವಾಗಿದೆ. 40ಕ್ಕೂ ಹೆಚ್ಚು ದೇಶಗಳಲ್ಲಿ ಇದೇ ದಿನವನ್ನು ಆಚರಿಸಲಾಗುವುದು.
SCROLL FOR NEXT