ಉಗ್ರರ ವಿಡಿಯೋ ನೋಡಿ, ಜಿಹಾದಿ ಸಾಹಿತ್ಯ ಓದಿದಾಕ್ಷಣ ಭಯೋತ್ಪಾದಕರಾಗುವುದಿಲ್ಲ: ಕೇರಳ ಹೈಕೋರ್ಟ್
ಕೊಚ್ಚಿ: ಉಗ್ರರ ವಿಡಿಯೋ ನೋಡಿ, ಜಿಹಾದಿ ಸಾಹಿತ್ಯ ಓದಿದಾಕ್ಷಣ ಯಾರೂ ಭಯೋತ್ಪಾದಕರಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಮುಸ್ಲಿಂ ವ್ಯಕ್ತಿಯೋರ್ವನಿಗೆ ಜಾಮೀನು ನೀಡುವ ಹಂತದಲ್ಲಿ ಕೇರಳ ಹೈಕೋರ್ಟ್ ಈ ರೀತಿ ಹೇಳಿದ್ದು, ಜಾಮೀನು ಪಡೆದ ವ್ಯಕ್ತಿಯ ಹಿಂದೂ ಧರ್ಮಕ್ಕೆ ಸೇರಿದ ಪತ್ನಿ ಆತನ ವಿರುದ್ಧ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವ ಆರೋಪ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ ನ್ಯಾ.ಎಎಂ ಶಫೀಕ್ ಹಾಗೂ ಪಿ ಸೋಮರಾಜನ್ ಅವರಿದ್ದ ವಿಭಾಗೀಯ ಪೀಠ, ಮೊಹಮ್ಮದ್ ರಿಯಾಸ್ ಗೆ ಜಾಮೀನು ಮಂಜೂರು ಮಾಡಿ ಉಗ್ರರ ವಿಡಿಯೋ ನೋಡಿ, ಜಿಹಾದಿ ಸಾಹಿತ್ಯ ಓದಿದಾಕ್ಷಣ ಓರ್ವ ವ್ಯಕ್ತಿ ಭಯೋತ್ಪಾದಕನಾಗುವುದಿಲ್ಲ ಎಂದು ಹೇಳಿದೆ.
ಹಿಂದೂ ಧರ್ಮಕ್ಕೆ ಸೇರಿದ್ದ ಮಹಿಳೆಯನ್ನು ವಿವಾಹವಾಗಿದ್ದ (ನಂತರ ಆಕೆ ಇಸ್ಲಾಂಗೆ ಮತಾಂತರಗೊಂಡಿದ್ದಳು, ) ಮೊಹಮ್ಮದ್ ರಿಯಾಸ್ ವಿವಾಹದಲ್ಲಿ ಭಿನ್ನಾಭಿಪ್ರಾಯ ಮೂಡಿ ತನ್ನ ಪತ್ನಿ ತನ್ನ ವಿರುದ್ಧ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಮಾಡಿದ್ದಾಳೆ ಎಂದು ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಾದ ಮಾಡಿದ್ದರು. ಅಷ್ಟೇ ಅಲ್ಲದೇ ತಾನು ಯಾವುದೇ ಭಯೋತ್ಪಾದಕ ಸಂಘಟನೆಗೂ ಸೇರಿದವನಲ್ಲ ಎಂದೂ ವಾದಿಸಿದ್ದರು.
ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿರಬಹುದು ಎಂಬ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು. ಈ ಅಂಶವನ್ನು ಗಮನಿಸಿರುವ ನ್ಯಾಯಾಲಯ, ಉಗ್ರರ ವಿಡಿಯೋ ನೋಡಿ, ಜಿಹಾದಿ ಸಾಹಿತ್ಯ ಓದಿದಾಕ್ಷಣ ಭಯೋತ್ಪಾದಕರಾಗುವುದಿಲ್ಲ, ಆತ ಭಯೋತ್ಪಾದಕ ಎಂಬುದನ್ನು ಸಾಬೀತುಪಡಿಸುವ ಸ್ಪಷ್ಟ ಸಾಕ್ಷ್ಯ ಸಿಗುವವರೆಗೂ ಆತನನ್ನು ಭಯೋತ್ಪಾದಕ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದೆ.
ಸ್ಥಳೀಯ ಪೊಲೀಸರು ಬಂಧಿತ ಆರೋಪಿಯ ಲ್ಯಾಪ್ ಟಾಪ್ ನಲ್ಲಿ ಜಿಹಾದಿ ಚಳುವಳಿಗೆ ಸಂಬಂಧಿಸಿದ ಸಾಹಿತ್ಯ, ವಿಡಿಯೋ, ಭಾಷಣಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೇ ಎನ್ಐಎ ಸಹ ಕೋರ್ಟ್ ನಲ್ಲಿ ವಾದ ಮಂಡಿಸುವ ವೇಳೆ ಹೇಳಿತ್ತು. ಅಷ್ಟೇ ಅಲ್ಲದೇ ಆತನ ಪತ್ನಿಯ ನಗ್ನಚಿತ್ರಗಳೂ ಸಹ ಲ್ಯಾಪ್ ಟಾಪ್ ನಲ್ಲಿ ಪತ್ತೆಯಾಗಿದ್ದವು ಎಂದು ಎನ್ಐಎ ಹೇಳಿತ್ತು. ಎನ್ಐಎ ವಾದವನ್ನು ಆಲಿಸಿರುವ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿ ಉಗ್ರರ ವಿಡಿಯೋ ನೋಡಿ, ಜಿಹಾದಿ ಸಾಹಿತ್ಯ ಓದಿದಾಕ್ಷಣ ಯಾರೂ ಭಯೋತ್ಪಾದಕರಾಗುವುದಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics