ದೇಶ

ಮಧ್ಯಪ್ರದೇಶ: ಶಾಲೆಯಲ್ಲಿ ಹಾಜರಿ ಕರೆಯುವಾಗ ವಿದ್ಯಾರ್ಥಿಗಳು 'ಜೈ ಹಿಂದ್' ಕೂಗಲು ಅಧಿಸೂಚನೆ!

Vishwanath S
ಮಧ್ಯಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವಾಗ ಜೈ ಹಿಂದ್ ಎಂದು ಕೂಗಬೇಕು ಎಂದು ವಿಚಿತ್ರ ನೋಟೀಸ್ ಜಾರಿ ಮಾಡಲಾಗಿದೆ. 
ರಾಜ್ಯ ಸರ್ಕಾರ ನಡೆಸುವ ಎಲ್ಲ ಶಾಲೆಗಳಲ್ಲಿ ಕಡ್ಡಾಯ ಆದೇಶ ಹೊರಡಿಸಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವವನ್ನು ಹುಟ್ಟುಹಾಕುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 
2017ರ ನವೆಂಬರ್ ನಲ್ಲಿ ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ವಿಜಯ್ ಶಾ ಅವರು ಇದೀಗ ಶಾಲೆಗಳಲ್ಲಿ ಹಾಜರಿ ಕರೆಯುವಾಗ 'ಎಸ್ ಸರ್' ಮತ್ತು 'ಎಸ್ ಮಾಮ್' ಬದಲಿಗೆ 'ಜೈ ಹಿಂದ್' ಎಂದು ಉತ್ತರಿಸುತ್ತಾರೆ ಎಂದು ಹೇಳಿದರು.
SCROLL FOR NEXT