ಬಿಆರ್ ಒ ಸೈನಿಕರು 
ದೇಶ

ಚೀನಾ ಗಡಿಯವರೆಗೂ ರಸ್ತೆ ನಿರ್ಮಾಣ ಮೂಲಕ ಇತಿಹಾಸ ಸೃಷ್ಟಿಸಿದ ಬಿಆರ್ ಒ !

ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ ಒ ಹೊಸ ಇತಿಹಾಸ ಸೃಷ್ಟಿಸಿದೆ

ಇಟಾನಗರ : ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ ಒ ಹೊಸ ಇತಿಹಾಸ ಸೃಷ್ಟಿಸಿದೆ. ಚೀನಾದ   ಲಿಮೆಕಿಂಗ್ ಮತ್ತು ಟಮಾ ಚುಂಗ್ ಚುಂಗ್ ಟಾಸ್ಕಿಂಗ್ ಅಕ್ಸಿಸ್ ನೊಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲಾಗಿದೆ.

ಲಿಮೆಕಿಂಗ್ ನಿಂದ ಈ ರಸ್ತೆ ಈಗ ಟಿಟಿಸಿ , ಟಾಸ್ಕಿಂಗ್ ವರೆಗೂ ಸುಮಾರು 80 ಕಿಲೋ ಮೀಟರ್ ದೂರವನ್ನು ಸಂಪರ್ಕಿಸಲಿದೆ. 1962ರ ಚೀನಾ ಯುದ್ದ ನಂತರ ರಸ್ತೆ  ಮೂಲಕ  ಚೀನಾ ಗಡಿ ತಲುಪವ ಸಾಧನೆ ಮಾಡಿರುವುದು ಐತಿಹಾಸಿಕವಾದದ್ದು ಎನ್ನಲಾಗಿದೆ.  

128 ಆರ್ ಸಿಸಿ ಒಸಿ ಕಂಪನಿ ಸೇರಿದಂತೆ ಹಲವರನ್ನೊಳಗೊಂಡ ತಂಡ ಈ ಸಾಧನೆ ಮಾಡಿರುವುದಾಗಿ ಬಿಆರ್ ಓ 23 ಬಿಆರ್ ಟಿಎಫ್ ಕಮಾಂಡರ್  ತಾನೀಸ್ ಕುಮಾರ್  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. 

ವರ್ಷದಲ್ಲಿ 9 ತಿಂಗಳು ಭಾರಿ, ಮಳೆ, ಹವಾಮಾನ ವೈಫರೀತ್ಯ, ನಿರಾಶ್ರಯ ಭೂಪ್ರದೇಶ, ಕಡಿದಾದ ಪರ್ವತಗಳು,  ಹತ್ತಿರದಿಂದ ಹರಿಯುವ ಉಗ್ರವಾದ ನದಿ ಸೇರಿದಂತೆ ಹಲವು ರೀತಿಯ ಸವಾಲುಗಳ ನಡುವೆಯೂ 2009ರಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು.

ಭಾರವಾದ ಉತ್ಖನನ ಯಂತ್ರಗಳು, ಇತರ ಯಂತ್ರೋಪಕರಣಗಳು ಮತ್ತು ವಾಹನಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸಾಗಿಸಲಾಗಿತ್ತು. ಇವುಗಳನ್ನು ಪರಿಣಾಮಕಾರಿಯಾಗಿ ಜೋಡಿಸಲು ತಿಂಗಳುಗಟ್ಟಲೇ ಕೆಲಸ ಮಾಡಲಾಗಿದೆ.

 600 ಮೀಟರ್ ಕಡಿದಾದ ಪರ್ವತದ ಮೊದಲ ಸೇತುವೆಯನ್ನು ಬಿಆರ್ ಒ ನಿರ್ಮಿಸಿ, ದೇಶಕ್ಕಾಗಿ ಭಾರತೀಯ ಯೋಧರು ನೀಡಿರುವ ಮಹತ್ವದ ಕೂಡುಗೆ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

SCROLL FOR NEXT