ದೇಶ

ಇಂದೋರ್ ಭಾರತದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೂ ಸ್ಥಾನ

Lingaraj Badiger
ನವದೆಹಲಿ: ಮಧ್ಯ ಪ್ರದೇಶದ ಇಂದೋರ್‌ ಮತ್ತೊಮ್ಮೆ ದೇಶದ ನಂಬರ್‌ 1 ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಭೋಪಾಲ್‌ ಮತ್ತು ಚಂಡೀಗಢ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಕಳೆದ ವರ್ಷದ ಸಮೀಕ್ಷೆಯಲ್ಲೂ ಇಂದೋರ್ ಮೊದಲ ಸ್ಥಾನ ಪಡೆದಿತ್ತು. ಇಂದು 2018ನೇ ಸಾಲಿನ ಸ್ವಚ್ಛ ನಗರಗಳ ಪಟ್ಟಿ ಪ್ರಕಟಿಸಿದ ಕೇಂದ್ರ ವಸತಿ ಮತ್ತು ನಗರ ನಿರ್ವಹಣೆ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು, ಸ್ವಚ್ಛತೆ ನಿರ್ವಹಣೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳ ಪೈಕಿ ಜಾರ್ಖಂಡ್‌ ಮೊದಲ ಸ್ಥಾನದಲ್ಲಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಇವೆ ಎಂದರು.
ಕಳೆದ ವರ್ಷದ ಸಮೀಕ್ಷೆಯಲ್ಲಿ 430 ನಗರಗಳನ್ನಷ್ಟೇ  ಆಯ್ದುಕೊಳ್ಳಲಾಗಿತ್ತು. ಆದರೆ ಈ ಬಾರಿ 4,203 ನಗರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು. 
10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ಪೈಕಿ ವಿಜಯವಾಡ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಇನ್ನು ಮೂರು ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯುಳ್ಳ ನಗರಗಳ ಪೈಕಿ ಮೈಸೂರು ನಂಬರ್‌ 1 ಸ್ಥಾನದಲ್ಲಿದೆ. ರಾಜ್ಯ ರಾಜಧಾನಿಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ.
ತ್ಯಾಜ್ಯ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಯ ಅರಿವು, ಸಂಪನ್ಮೂಲಗಳ ಸದ್ಬಳಕೆ, ನಾಗರಿಕರ ಸಹಭಾಗಿತ್ವ ಇತ್ಯಾದಿ ಮಾನದಂಡಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಸಮೀಕ್ಷೆ ನಡೆಸಲಾಗಿದೆ.
SCROLL FOR NEXT