ರಂಜಾನ್ ನಿಮಿತ್ತ ಕದನ ವಿರಾಮ ಇದ್ದರೂ ಪಾಕ್ ನನ್ನ ಪತಿಯನ್ನು ಕೊಂದು ಹಾಕಿದೆ: ಹುತಾತ್ಮ ಯೋಧನ ಪತ್ನಿ 
ದೇಶ

ರಂಜಾನ್ ನಿಮಿತ್ತ ಕದನ ವಿರಾಮ ಇದ್ದರೂ ಪಾಕ್ ನನ್ನ ಪತಿಯನ್ನು ಕೊಂದು ಹಾಕಿದೆ: ಹುತಾತ್ಮ ಯೋಧನ ಪತ್ನಿ

ರಂಜಾನ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ನಡೆದಂತೆ ಸೇನೆಗೆ ಭಾರತ ಸೂಚನೆ ನೀಡಿತ್ತು. ಕದನ ವಿರಾಮ ಇದ್ದರೂ ಪಾಕಿಸ್ತಾನ ತನ್ನ ಉದ್ಧಟತನದ ಮೂಲಕ ನನ್ನ ಪತಿಯನ್ನು ಕೊಂದು ಹಾಕಿದೆ ಎಂದು ದುಃಖತಪ್ತ ಹುತಾತ್ಮ...

ನವದೆಹಲಿ: ರಂಜಾನ್ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ನಡೆದಂತೆ ಸೇನೆಗೆ ಭಾರತ ಸೂಚನೆ ನೀಡಿತ್ತು. ಕದನ ವಿರಾಮ ಇದ್ದರೂ ಪಾಕಿಸ್ತಾನ ತನ್ನ ಉದ್ಧಟತನದ ಮೂಲಕ ನನ್ನ ಪತಿಯನ್ನು ಕೊಂದು ಹಾಕಿದೆ ಎಂದು ದುಃಖತಪ್ತ ಹುತಾತ್ಮ ವೀರ ಯೋಧ ಸೀತಾರಾಮ್ ಉಪಾಧ್ಯಾಯ ಅವರ ಪತ್ನಿ ಹೇಳಿದ್ದಾರೆ. 
ನನ್ನ ಪತಿಯನ್ನು ಪಾಕಿಸ್ತಾನ ಹತ್ಯೆ ಮಾಡಿದೆ. ಇದೀಗ ಸರ್ಕಾರ ಪರಿಹಾರ ನೀಡುವುದರಿಂದ ಏನಾಗುತ್ತದೆ? ನನ್ನ ಪತಿಯನ್ನು ಹಿಂದಕ್ಕೆ ಕರೆತರಲು ಸಾಧ್ಯವಿಲ್ಲವಲ್ಲ ಯೋಧನ ಪತ್ನಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರ್'ಎಸ್ ಪುರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಈ ವೇಳೆ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಯೋಧ ಸೀತಾರಾಮ್ ಉಪಾಧ್ಯಾಯ ಅವರು ಹುತಾತ್ಮರಾಗಿದ್ದರು. 
ಕೆಲ ದಿನಗಳ ಹಿಂದಷ್ಟೇ ಅಧಿಕೃತ ಪ್ರಕಟನೆಯೊಂದನ್ನು ನೀಡಿದ್ದ ಕೇಂದ್ರ ಗೃಹ ಇಲಾಖೆ, ರಂಜಾನ್ ತಿಂಗಳಲ್ಲಿ ಭಾರತೀಯ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ. ಯಾರಾದರೂ ದಾಳಿ ನಡೆಸಿದರೆ ಮರು ದಾಳಿ ನಡೆಸಲು ಸೇನೆಗೆ ಅವಕಾಶವಿದೆ ಎಂದು ಹೇಳಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; 127 ರನ್‌ಗಳ ಭರ್ಜರಿ ಜಯ, T20 ಸರಣಿ ಕ್ಲೀನ್ ಸ್ವೀಪ್

'ಮೇಡಂ, ನಿಮ್ಮಂತ ಸುಂದರಿ ಯಾರೂ ಇಲ್ಲ'; ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, CM ಕೋಟಾದಡಿ IAS ಹುದ್ದೆ ಕೊಡಿಸ್ತೇನೆ!

Tata sons ಅಧ್ಯಕ್ಷರಾಗಿ ಚಂದ್ರಶೇಖರನ್ ಮರು ಆಯ್ಕೆ, IPO ಗೆ ಮತದಾನ ಕಾನೂನುಬಾಹಿರ- ಟಾಟಾ ಟ್ರಸ್ಟ್ಸ್ ತಗಾದೆ

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

India vs Afghanistan: ರೋಹಿತ್ ಶರ್ಮಾ ದಾಖಲೆ ಮುರಿದ ಅಭಿಷೇಕ್ ಶರ್ಮಾ; T20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!