ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ಅಪರಾಧಗಳ ವೀಡಿಯೊಗಳನ್ನು ನಿರ್ಬಂಧಿಸಲು ವಿಫಲವಾದ ಆನ್ ಲೈನ್ ಸಂಸ್ಥೆಗಳಾದ ಗೂಗಲ್, ಫೇಸ್ ಬುಕ್ ಮತ್ತಿತರೆ ಸಂಸ್ಥೆಗಳಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಯಾಹೂ, ಫೇಸ್ ಬುಕ್ ಐರ್ಲೆಂಡ್, ಫೇಸ್ ಬುಕ್ ಇಂಡಿಯಾ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಮೈಕ್ರೋಸಾಫ್ಟ್ ಮತ್ತು ವಾಟ್ಸ್ ಅಪ್ ಗಳಿಗೆ ನ್ಯಾಯಾಲಯ ನಿಡಿದ ಆದೇಶದ ಹೊರತಾಗಿಯೂ ಇದರ ಆದೇಶ ಜಾರಿ ಕುರಿತಂತೆ ಯಾವುದೇ ಪ್ರಗತಿಯ ವರದಿ ಸಲ್ಲಿಸಲಿಲ್ಲ ಎಂದು ನ್ಯಾಯಾಧೀಶರ ಮದನ್ ಬಿ ಲೋಕೂರ್ ಮತ್ತು ಯು ಯು ಲಲಿತ್ ಅವರ ಪೀಠ ತಿಳಿಸಿದೆ.
ಜೂನ್ 15 ಕ್ಕೆ ಮುನ್ನ ಅಫಿಡವಿಟ್ ಅನ್ನು ಸಲ್ಲಿಸುವಂತೆ ಮೇಲ್ಮನವಿ ನ್ಯಾಯಾಲಯ ನಿರ್ದೇಶನ ನೀಡಿದೆ. "ಎಪ್ರಿಲ್ 16 ರ ದಿನಾಂಕದ ನಮ್ಮ ಆದೇಶದಲ್ಲಿ ಯಾಹೂ, ಫೇಸ್ ಬುಕ್, ಐರ್ಲೆಂಡ್, ಫೇಸ್ ಬುಕ್ ಇಂಡಿಯಾ, ಗೂಗಲ್ ಇಂಡಿಯಾ, ಗೂಗಲ್ ಇಂಕ್., ಮೈಕ್ರೋಸಾಫ್ಟ್ ಮತ್ತು ವಾಟ್ಸ್ ಅಪ್ ನಂತಹಾ ಸಂಸ್ಥೆಗಳಿಗೆ ವರದಿ ನೀಡಿವಂತೆ ಆದೇಶಿಸಿದೆ.
ಆನ್ ಲೈನ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರವು ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ ಅಲ್ಲದೆ ಇದೇ ಜುಲೈ 15 ಅಥವಾ ಅದಕ್ಕೂ ಮುನ್ನ ಪೋರ್ಟಲ್ ಪ್ರಾರಂಭವಾಗಲಿದೆ ಎಂದು ಅದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos