ದೇಶ

ಅಲಹಾಬಾದ್ ಗೆ ಪುನರ್ ನಾಮಕರಣ ಸಾಧ್ಯತೆ: ಹೊಸ ಹೆಸರು 'ಪ್ರಯಾಗ್‏ರಾಜ್‏'

Nagaraja AB

ಅಲಹಾಬಾದ್: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ  ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಆಗಿ ಪುನರ್ ನಾಮಕರಣ ಮಾಡುವ  ಸಾಧ್ಯತೆ ಇದೆ. ಮುಂದಿನ ವರ್ಷದ ಕುಂಭಮೇಳದ ಮುಂಚಿತವಾಗಿಯೇ ಈ ಬಗ್ಗೆ ನಿರ್ಧಾರವಾಗಲಿದೆ.

ಅಲಹಾಬಾದ್ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು,  ಗಂಗಾ, ಯಮುನಾ, ಹಾಗೂ ಸರಸ್ವತಿ ನದಿಗಳು ರಾಜ್ಯಾದ್ಯಂತ ಹರಿಯುತ್ತವೆಯ ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಕುಂಭಮೇಳ ಜಗತ್ಪ್ರಸಿದ್ದಿ ಹೊಂದಿದೆ.  ಸರ್ಕಾರದ ನಿರ್ಧಾರದ ನಂತರ ಪ್ರಯಾಗ್ ರಾಜ್ ಆಗಿ ಪುನರ್ ನಾಮಕರಣಗೊಳ್ಳಲಿದೆ.

ಹಲವು ದಿನಗಳಿಂದ ಅಲಹಾಬಾದ್ ಎಂದೇ ಕರೆಯುತ್ತಿರುವ ಈ ನಗರವನ್ನು ಪ್ರಯಾಗ್ ರಾಜ್ ಸ್ಥಾಪಿಸಿದ್ದರು . ಈ ಹಿನ್ನೆಲೆಯಲ್ಲಿ ಹೆಸರನ್ನು ಬದಲಾಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಪಷ್ಪಪಡಿಸಿದ್ದಾರೆ.

SCROLL FOR NEXT