ದೇಶ

ಬೋದ್ ಗಯಾ ಸರಣಿ ಬಾಂಬ್ ಸ್ಫೋಟ; ಇಂಡಿಯನ್ ಮುಜಾಹಿದ್ದೀನ್ ನ 5 ಉಗ್ರರು ದೋಷಿಗಳು

Srinivasamurthy VN
ಪಾಟ್ನಾ: 2013ರ ಬೋದ್ ಗಯಾ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಐದೂ ಉಗ್ರರು ದೋಷಿಗಳು ಎಂದು ವಿಶೇಷ ಎನ್ ಐಎ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತೀರ್ಪು ನೀಡಿದ ನವಿಶೇಷ ಎನ್ ಐಎ ನ್ಯಾಯಾಲಯದ ನ್ಯಾಯಮೂರ್ತಿ ಮನೋಜ್ ಕುಮಾರ್ ಸಿನ್ಹಾ ಅವರು, ಎಲ್ಲ ಐದೂ ಆರೋಪಿಗಳ ವಿರುದ್ಧ ಆರೋಪ ಸಾಕ್ಷ್ಯಾಧಾರಗಳ ಸಾಬೀತಾಗಿದೆ. ಹೀಗಾಗಿ ಬಂಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರರಾದ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾಹ್, ಒಮೇರ್ ಸಿದ್ದಿಕಿ ಮತ್ತು ಅಝರುದ್ದೀನ್ ಖುರೇಶಿ ಅವರು ವಿವಿಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯಿದೆ ಮತ್ತು ಸ್ಫೋಟಕ ಕಾಯಿದೆ ಅಡಿಯಲ್ಲಿ ದೋಷಿಗಳು ಎಂದು ತೀರ್ಪು ನೀಡಲಾಗಿದೆ ಎಂದು ಹೇಳಿದರು.
ಅಂತೆಯೇ ಶಿಕ್ಷೆ ಪ್ರಮಾಣ ಪ್ರಕಟವನ್ನು ಇದೇ ಮೇ 31ರಂದು ಘೋಷಣೆ ಮಾಡುವುದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿದ್ದಾರೆ. 
2013ರ ಜುಲೈ 7ರಂದು ಪವಿತ್ರ ಬೋದ್ ಗಯಾ ಯಾತ್ರಾ ಸ್ಥಳದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಮೂವರು ಬೌದ್ಧಗುರುಗಳು ಸೇರಿದಂತೆ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದರು.
SCROLL FOR NEXT