ದೇಶ

ಮೋದಿ ಸರ್ಕಾರ 4 ವರ್ಷಗಳಿಂದ ಜನರಿಗೆ ದ್ರೋಹ ಮಾಡಿದೆ: ಕಾಂಗ್ರೆಸ್

ನಾಲ್ಕು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು,....

ಜೈಪುರ: ನಾಲ್ಕು ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ವಂಚಿಸುತ್ತಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ 'ನಂಬಿಕೆ ದ್ರೋಹ' ಎಂಬ ಕಿರು ಪುಸ್ತಕ ಬಿಡುಗಡೆ ಮಾಡಿದ್ದು, ಕೃಷಿ ಕ್ಷೇತ್ರ ಈಗಲೂ ಸಂಕಷ್ಟದಲ್ಲಿದೆ. ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಲೆ ಸಹ ಸಿಕ್ಕಿಲ್ಲ ಎಂದು ದೂರಿದೆ.
ಬಿಜೆಪಿ ಆಡಳಿತವಧಿಯಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಅವರು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಆದರೆ 2016-17ನೇ ಸಾಲಿನಲ್ಲಿ ಕೇವಲ 4.16 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಕಾಂಗ್ರೆಸ್ ಕಿರುಪುಸ್ತಕದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾವು ನಮ್ಮ ರೈತರನ್ನು ರಕ್ಷಿಸಬೇಕು, ನ್ಯಾಯಾಲಯದ ತೀರ್ಪನ್ನೂ ಪಾಲಿಸಬೇಕು: CWRC ಆದೇಶಕ್ಕೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಗಡಿಯ ಸ್ಥಿತಿ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತೆ: ಚೀನಾ ವಿರುದ್ಧ ಕೆರಳಿದ ಭಾರತ

ಇದು ಮುದಿ ಗುಳ್ಳೆ ನರಿ: ಬಾಲಿವುಡ್ ನಟ ನಸೀರುದ್ದೀನ್ ಶಾ ವಿರುದ್ಧ BJP ಸಂಸದೆ ಕಂಗನಾ ಕಿಡಿ!

ನೂತನ ಸಚಿವರಿಗೆ ಸರ್ಕಾರಿ ನಿವಾಸ, ಕಾರು ಹಂಚಿಕೆ ಮಾಡಿ ಆದೇಶ; ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ವಿವರ

ತಮಿಳುನಾಡಿಗೆ ಕಾವೇರಿ ನೀರು: CWMA ನಿರ್ದೇಶನದ ವಿರುದ್ಧ ಕಾನೂನು ಆಯ್ಕೆಗಳ ಪರಿಶೀಲನೆ: ಸಹಾಯಕ ಆಯುಕ್ತ ಗೌರವ್ ಗುಪ್ತ