ಅಸನ್ಸೋಲ್: ಭಾರತದ ಪ್ರಜಾಪ್ರಭುತ್ವವವನ್ನು ಬಾಂಗ್ಲಾ ಪ್ರಧಾನಿ ಹಸೀನಾ ಹಾಡಿ ಹೊಗಳಿದ್ದು, ಭಾರತ ತನ್ನ ಪ್ರಜಾಪ್ರಭುವದ ಪರಂಪರೆಯಿಂದಲೇ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಹಸೀನಾ, ತಮ್ಮ ದೇಶದ ಯುವಕರು ಭಯೋತ್ಪಾದನೆ, ಮಾದಕದ್ರವ್ಯ ವ್ಯಸನಕ್ಕೆ ತುತ್ತಾಗದಂತೆ ತಡೆಗಟ್ಟಲು ನೆರೆ ರಾಷ್ಟ್ರಗಳ ಬೆಂಬಲವನ್ನು ಕೋರಿದ್ದು, ನಾವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಸ್ವತಂತ್ರ ರಾಷ್ಟ್ರವಾಗಿದ್ದೇವೆ, ಆದರೆ ನಮಗೆ ಭಾರತದಂತೆ ಪ್ರಜಾಪ್ರಭುತ್ವದ ಪರಂಪರೆಯನ್ನು ಪಡೆಯುವಷ್ಟು ಅದೃಷ್ಟವಿರಲಿಲ್ಲ, ಭಾರತದ ಅಭಿವೃದ್ಧಿಗೆ ಇಲ್ಲಿನ ಪ್ರಜಾಪ್ರಭುತ್ವದ ಪರಂಪರಯೇ ಕಾರಣವಾಗಿದೆ, ನಮ್ಮ ದೇಶದ ಯುವಕರೂ ಸಹ ಉತ್ತಮವಾದ, ಅರ್ಥಪೂರ್ಣ ಬದುಕು ಸಾಗಿಸುವಂಯ್ತಾಗಬೇಕು ಇದಕ್ಕಾಗಿ ನೆರೆ ರಾಷ್ಟ್ರಗಳ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.