ನವದೆಹಲಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಸತತ 14 ನೇ ದಿನವಾದ ಇಂದೂ ಕೂಡಾ ತೈಲ ಬೆಲೆ ಹೆಚ್ಚಳಗೊಂಡಿದ್ದು, ದೇಶಾದ್ಯಂತ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ದೆಹಲಿಯಲ್ಲಿನ ಪರಿಷ್ಕೃತ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 78. 12 ರೂ. ಮುಂಬೈಯಲ್ಲಿ 85. 93, ಕೋಲ್ಕತ್ತಾದಲ್ಲಿ 80.76, ಚೆನ್ನೈಯಲ್ಲಿ 81. 11 ರೂ. ಆಗಿದೆ.
ನಿರಂತರ ತೈಲ ಬೆಲೆ ಏರಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿಗೆ ಸಾರ್ವಜನಿಕರಿಗೆ ಭರವಸೆ ನೀಡಿದ್ದರು.
ಆದರೂ, ತೈಲಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಲಾಗಿದ್ದು, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜರ್ಝರಿತಗೊಂಡಿರುವ ಜನಸಾಮಾನ್ಯರಿಗೆ ಬರೆ ಹಾಕಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ರಪ್ತು ಮಾಡುವ ಕಂಪನಿಗಳ ಒಕ್ಕೂಟ ಬೆಲೆ ಹೆಚ್ಚಿಸಿರುವುದು ಇಂಧನ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್ ಟಿ ಅಡಿ ತರಲು ಉದ್ದೇಶಿಸಿವೆ ಎಂದು ಕಳೆದ ತಿಂಗಳಷ್ಟೇ ಧರ್ಮೇಂದ್ರ ಪ್ರಧಾನ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics