ಭಾರತಕ್ಕೆ ಶೀಘ್ರವೇ ಸಿಗಲಿದೆ S-400 ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆ: ವಿಶೇಷತೆಗಳೇನು ಗೊತ್ತೇ?
ನವದೆಹಲಿ: ರಕ್ಷಣಾ ಕ್ಷಿಪಣಿಗಳಿಗೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಭಾರತದ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು, ಶೀಘ್ರವೇ ಸಿಗಲಿದೆ S-400 ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆ ಕೈ ಸೇರಲಿದೆ.
ರಷ್ಯಾದೊಂದಿಗೆ ಯಾವುದೇ ರೀತಿಯ ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ಕ್ರಮ ಜರುಗಿಸುವ ಅಮೆರಿಕದ ಕಾನೂನನ್ನು ಎದುರಿಸುವುದಕ್ಕೆ ಇರುವ ಮಾರ್ಗಗಳ ಬಗ್ಗೆ ಎರಡೂ ರಾಷ್ಟ್ರಗಳು ಚರ್ಚೆ ನಡೆಸುತ್ತಿವೆ ಎಂದು ಭಾರತೀಯ ವಾಯುಪಡೆ ಅಧಿಕಾರಿ ತಿಳಿಸಿದ್ದಾರೆ.
ಸುಮಾರು 40,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದು 2018 ರ ಅಕ್ಟೋಬರ್ ನಲ್ಲಿ ಪ್ರಧಾನಿ ಮೋದಿ-ಪುಟಿನ್ ಭೇಟಿಯಾಗುವುದಕ್ಕೂ ಮುನ್ನ ಈ ಒಪ್ಪಂದವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭಾರತಕ್ಕೆ ದೂರಗಾಮಿ ಕ್ಷಿಪಣಿ ವ್ಯವಸ್ಥೆಗಳ ಅಗತ್ಯವಿದ್ದು ಚೀನಾ-ಭಾರತದ ಗಡಿಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸಲು ಈ ಕ್ಷಿಪಣಿಗಳನ್ನು ಬಳಕೆ ಮಾಡಲಾಗುತ್ತದೆ. S-400 ಟ್ರಯಂಫ್ 400 ಕಿ.ಮೀ ವರೆಗೆ ಒಳಬರುವ ಕ್ಷಿಪಣಿಗಳು ಹಾಗೂ ಪ್ರತಿಕೂಲ ವಿಮಾನಗಳು, ಡ್ರೋನ್ ಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ರಷ್ಯಾದೊಂದಿಗೆ 2014 ರಲ್ಲಿ ಒಪ್ಪಂದ ಮಾಡಿಕೊಂಡಿದ್ದ ಚೀನಾ ಈ ಎಸ್-400 ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದ ಮೊದಲ ರಾಷ್ಟ್ರವಾಗಿತ್ತು.