ದೇಶ

ಪುಣೆ: ಶುಲ್ಕ ಪಾವತಿಸಲು ವಿಫಲವಾದ 150 ವಿದ್ಯಾರ್ಥಿಗಳಿಗೆ ಟಿಸಿ ನೀಡಿದ ಶಾಲೆ!

Raghavendra Adiga
ಮುಣೆ (ಮಹಾರಾಷ್ಟ್ರ): ಪುಣೆ ಮೂಲದ  ಝೀಲ್ ಎಜುಕೇಶನ್ ಸೊಸೈಟಿಯ ದ್ಯಾನಗಂಗಾ ಶಾಲೆ ಶುಲ್ಕ ಪಾವತಿಸುವುದಕ್ಕೆ ವಿಫಲವಾದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ (ಟಿಸಿ) ನೀಡಿದೆ.
ದ್ಯಾನಗಂಗಾ ಶಾಲೆ ಪುಣೆಯ ಸಮೀಪ ಹಿಂಗ್ಲೆಯಲ್ಲಿದೆ. ಶಾಲಾ ಆಡಳಿತ ಮಂಡಳಿ ದೊಡ್ಡ ಪ್ರಮಾಣದ ಶುಲ್ಕ ಕೇಳುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
"ನಾವೀಗಾಗಲೇ ರೂ 30,000 ಶುಲ್ಕ ಹಾಗೂ 10,ಸಾವಿರ ರೂ. ಠೇವಣಿ ನೀಡಿದ್ದೇವೆ. ಠೇವಣಿ ಹಣದಲ್ಲೇ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳಲು ನಾವು ಶಾಲೆಗೆ ಮನವಿ ಮಾಡಿದರೆ ಅವರು ಕೇಳಲು ತಯಾರಿಲ್ಲ" ಎಂದು ಪೋಷಕರು ಹೇಳಿದರು.
ಶಾಲೆಯ ತೀರ್ಮನವನ್ನು ಪ್ರ್ಶ್ನಿಸಿ ನಾಗರಿಕರೊಬ್ಬರು  ಝೀಝ್ ಎಜುಕೇಶನ್ ಸೊಸೈಟಿಗೆ ಬಾಬೆ ಹೈಕೋರ್ಟ್ ಮೊರೆ ಹೋಗಿದ್ದು ಕೋರ್ಟ್ ಸೊಸೈಟಿ ಹಾಗೂ ಶಾಲೆಗೆ ನೋಟೀಸ್ ಜಾರಿ ಮಾಡಿದೆ. ಇದಾದ ಬಳಿಕ ಶಾಲೆ ಆಡಳಿತ ಈ ತೀರ್ಮಾನಕ್ಕೆ ಬಂದಿದೆ. 
ನೋಟೀಸ್ ನಲ್ಲಿ ಹೇಳಿದಂತೆ ಶಾಲಾ ಶುಲ್ಕ ಪಾವತಿ ಮಾಡದಿದ್ದರೆ ಅಂತಹವರಿಗೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಹಾಕುವ ಅಧಿಕಾರ ಆಡಳಿತ ಮಂಡಳಿಗಿದೆ.ಝೀಝ್ ಸೊಸೈಟಿಯ  ಕಾನೂನು ಸಲಹೆಗಾರರಾದ ವಿಕ್ರಮ್ ದೇಶಮುಖ್ ಮಾತನಾಡಿ ನ್ಯಾಯಾಲಯದ ಆದೇಶದ ಪ್ರಕಾರ ಶಾಲೆ ವರ್ಗಾವಣಾ ಪತ್ರ ನೀಡಿದೆ ಎಂದಿದ್ದಾರೆ.
"2016-17ರಲ್ಲಿ ಅವರು ಶುಲ್ಕ ಪಾವತಿ ಮಾಡಿದ್ದಾರೆ, ಅದೇ ಪ್ರಮಾಣದ ಶುಲ್ಕವನ್ನು 2017-18, ಪಾವತಿ ಮಾಡಲು ಅವರೇಕೆ ಹಿಂಜರಿಯುತ್ತಾರೆ ಅರ್ಥವಾಗುವುದಿಲ್ಲ, ಶಾಲೆ ಅವರಿಗೆ ಶುಲ್ಕ ಪಾವತ್ರಿ ಮಾಡಲು ಏಳು ದಿನಗಳ ಅವಧಿಯನ್ನೂ ನೀಡಿತು, ಆದರೆ ಯಾರೊಬ್ಬರೂ ಶುಲ್ಕ ಪಾವತಿಸಲಿಲ್ಲ ಎಂದು ಅವರು ಹೇಳಿದರು.
SCROLL FOR NEXT