ಪೆಟ್ರೋಲ್ ಬೆಲೆಯಲ್ಲಿ 1 ಪೈಸೆ ಇಳಿಕೆ: ಬಾಲಿಶ ಮತ್ತು ಅಣಕ ಎಂದು ರಾಹುಲ್ ಗಾಂಧಿ ಟ್ವೀಟ್
ನವದೆಹಲಿ: ಪೆಟ್ರೋಲ್, ಡೀಸೇಲ್ ಬೆಲೆಯಲ್ಲಿ ಒಂದು ಪೈಸೆ ಕಡಿತ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ’ಬಾಲಿಶ’ ಎಂದು ಹಾಸ್ಯ ಮಾಡಿದ್ದಾರೆ.
ಪ್ರಧಾನಿ ಮೋದಿ ಸಾರ್ವಜನಿಕರೊಡನೆ ತಮಾಷೆಯ ಆಟವಾಡುತ್ತಿದ್ದಾರೆ ಎಂದು ಆರೋಪಿಸಿರುವ ರಾಹುಲ್ "ಒಂದು ಪೈಸೆ ಕಡಿತ ಎನ್ನುವುದು 'ಬಾಲಿಶ' ಮತ್ತು 'ಕಳಪೆ ಎಂದು ಅಣಕವಾಡಿದ್ದಾರೆ.
ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ರಾಹುಲ್ , "ನೀವು ಇಂದು ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು 1 ಪೈಸೆ ಕಡಿತ ಮಾಡಿದ್ದೀರಿ. ಒಂದು ಪೈಸೆ!? ಇದೇನು ಬಾಲಿಶ ಕ್ರಮ, ಜನರೊಡನೆ ತಮಾಷೆಯಾಗಿ ಆಡಬೇಕೆಂದು ನಿಮ್ಮ ಆಲೋಚನೆಯಾಗಿದ್ದರೆ ಖಚಿತವಾಗಿ ಇದು ಬಾಲಿಶ ಹಾಗೂ ಕಳಪೆಯಾಗಿದೆ" ಎಂದು ಅಣಕವಾಡಿದ್ದಾರೆ.
ಕಳೆದ ವಾರ ಮೋದಿಗೆ ರಾಹುಲ್ ಒಡ್ಡಿದ್ದ ಇಂಧನ ಸವಾಲ್ ಗೆ ಒಂದು ಪೈಸೆ ಕಡಿತ ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ವಿರಾಟ್ ಕೊಹ್ಲಿಯವರ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದ ಮೋದಿಗೆ ರಾಹುಲ್ ಫಿಟ್ ನೆಸ್ ಬದಲು ಇಂಧನ ಚಾಲೆಂಜ್ ಒಪ್ಪಿಕೊಳ್ಳುವಂತೆ ಸವಾಲೆಸೆದಿದ್ದರು.
ಸುಮಾರು ಹದಿನೈದು ದಿನಗಳ ಬಳಿಕ ಪೆಟ್ರೋಲ್, ಡೀಸೇಲ್ ಬೆಲೆಗಳಲ್ಲಿ ಇಂದು ಕೇವಲ ಒಂದು ಪೈಸೆಯಷ್ಟು ಕಡಿತವಾಗಿದೆ.