ಆಗ್ರಾ: ಕೋತಿಗಳ ಚೇಷ್ಟೆ ಕೆಲವೊಮ್ಮೆ ಎಂತಹ ಸಂಕಷ್ಟದ ಪರಿಸ್ಥಿತಿಗೆ ನೂಕುತ್ತವೇ ಎಂಬುದಕ್ಕೆ ಇಲ್ಲಿ ನಡೆದಿರುವ ಘಟನೆಯೊಂದು ತಾಜಾ ಉದಾಹರಣೆಯಂತಿದೆ.
ಧನ್ ಕಾರನ್ ಬಳಿಯ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಪ್ರವೇಶದ್ವಾರದಲ್ಲಿ ಕುಳಿತಿದ್ದ ಕೋತಿಯೊಂದು ತಂದೆ ಹಾಗೂ ಮಗಳಿಂದ 2 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ದೋಚಿ ಪರಾರಿಯಾಗಿದೆ.