ದೇಶ

ಕೋಲ್ಕತಾ: ಶಂಕಿತ ನಿಪಾಹ್ ವೈರಾಣು ಸೋಂಕಿಗೆ ಯೋಧ ಬಲಿ

Sumana Upadhyaya

ಕೋಲ್ಕತ್ತಾ: ನಿಫಾ ವೈರಸ್ ಸೋಂಕಿನಿಂದ ಯೋಧ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಕೇರಳ ಮೂಲದ ಸೀನು ಪ್ರಸಾದ್ ಕೋಲ್ಕತ್ತಾದ ಫೋರ್ಟ್ ವಿಲ್ಲಿಯಮ್ ನ ಈಸ್ಟರ್ನ್ ಕಮಾಂಡ್ ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಜ್ವರದಿಂದ ಬಳಲುತ್ತಿದ್ದ ಅವರು ಕಳೆದ 20ರಂದು ಕಮಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 25ರಂದು ಮೃತಪಟ್ಟಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಕಳೆದ ಮೇ 13ರಂದು ಕರ್ತವ್ಯಕ್ಕೆ ಮರು ಹಾಜರಾಗುವ ಮುನ್ನ ಪ್ರಸಾದ್ ಕೇರಳಕ್ಕೆ ಒಂದು ತಿಂಗಳ ರಜೆಯಲ್ಲಿ ತೆರಳಿದ್ದರು. ಅವರ ದೇಹದ ರಕ್ತದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು. ಇದುವರೆಗೆ ಸಂಸ್ಥೆಯಿಂದ ಸೀನು ಪ್ರಸಾದ್ ನಿಫಾ ವೈರಸ್ ನಿಂದ ಅಸುನೀಗಿದರು ಎಂಬ ಬಗ್ಗೆ ಖಚಿತ ವರದಿ ಬಂದಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

SCROLL FOR NEXT