ಚಂಡಿಗಢ: ಪಂಜಾಬ್ ಸೇರಿದಂತೆ ದೇಶಾದ್ಯಂತ ನಗರ ಪ್ರದೇಶಗಳಿಗೆ ಜೂನ್ 1 ರಿಂದ 10ರವರೆಗೆ ರೈತರು ಹಾಲು ಮತ್ತು ತರಕಾರಿಗಳನ್ನು ಸರಬರಾಜು ಮಾಡುತ್ತಿಲ್ಲ. ಈ ಸರಕುಗಳ ಪೈಕಿ ಯಾವುದಾದರೂ ಒಂದನ್ನು ಖರೀದಿಸಬೇಕಾದರೂ ಗ್ರಾಮಗಳಿಗೆ ಹೋಗಬೇಕು ಮತ್ತು ರೈತರ ಬೇಡಿಕೆಯ ದರದಲ್ಲಿ ಅವುಗಳನ್ನು ಖರೀದಿಸಬೇಕು. ಈ ನಿರ್ಧಾರವನ್ನು ರೈತರು 'ಗ್ರಾಮಗಳು ಮುಚ್ಚಿವೆ ಮತ್ತು ರೈತರು ರಜೆಯಲ್ಲಿದ್ದಾರೆ' ಎಂಬ ಘೋಷಣೆ ಅಡಿಯಲ್ಲಿ ತೆಗೆದುಕೊಂಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಭಾರತೀಯ ಕಿಶನ್ ಯೂನಿಯನ್ (ಬಿಕೆಯು) ಪಂಜಾಬ್ ಘಟಕದ ಅಧ್ಯಕ್ಷ ದಲ್ಬೀರ್ ಸಿಂಗ್ ರಾಜೇವಾಲ್ ಅವರು, ಈ ನಿರ್ಧಾರವನ್ನು ರೈತರ ಸಂಘ ಮತ್ತು ಎಲ್ಲಾ ರಾಜ್ಯಗಳ ಒಕ್ಕೂಟಗಳು ತೆಗೆದುಕೊಂಡಿದ್ದು, ಏರಿಕೆಯಾಗುತ್ತಿರುವ ಕೃಷಿ ಬೆಲೆ ದರಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ, ಹೀಗಾಗಿ ಈಗ ರೈತರಿಗೆ ಯಾವುದೇ ಆಯ್ಕೆಯಿಲ್ಲ. ಡೀಸೆಲ್ ಬೆಲೆಗಳು ನಿರಂತರವಾಗಿ ಹದಿನಾರು ದಿನಗಳಿಂದ ಏರಿಕೆಯಾಗುತ್ತಲೆ ಇದೆ. ರೈತರು ತಮ್ಮ ಕ್ಷೇತ್ರಗಳನ್ನು ನೀರಾವರಿ ಮಾಡಲು ಟ್ರಾಕ್ಟರುಗಳು ಮತ್ತು ಡೀಸೆಲ್ ಜನರೇಟರ್ಗಳನ್ನು ಬಳಸುತ್ತಾರೆ, ಹೀಗಾಗಿ ತಮ್ಮ ಉತ್ಪಾದನಾ ವೆಚ್ಚ ಮತ್ತಷ್ಟು ಹೆಚ್ಚಳವಾಗಿದೆ ಎಂದರು.
ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕಡಿಮೆ ಇದ್ದು ಆದರೆ ಹಾಲಿನ ದರ ಏರಿಕೆಯಾಗಿದೆ. ಈ ಬಾರಿ ವರ್ಕಾ ರೈತರಿಗೆ ಲೀಟರ್ ಗೆ 7 ರೂಪಾಯಿ ಕಡಿಮೆ ಮಾಡಿ ಲೀಟರ್ ಗೆ 22 ರೂಪಾಯಿಗಳನ್ನು ನೀಡುತ್ತಿದೆ ಆದರೆ ಮಾರುಕಟ್ಟೆಯಲ್ಲಿ ಮಾತ್ರ ಒಂದು ಲೀಟರ್ ಗೆ 45 ರುಪಾಯಿಗೆ ಮಾರಾಟ ಮಾಡುತ್ತಿದೆ. ಇನ್ನು ತರಕಾರಿಗಳಿಗೆ ಸಂಬಂಧಿಸಿದಂತೆ ಟೊಮೆಟೊಗಳು ಮತ್ತು ಕುಂಬಳಕಾಯಿಗಳನ್ನು ಕೆಜಿಗೆ ಒಂದು ರೂಪಾಯಿಗೆ ರೈತರು ಮಾರಾಟ ಮಾಡುತ್ತಾರೆ. ಕೆಜಿಗೆ 50 ಪೈಸೆಗೆ ಈರುಳ್ಳಿ ಮತ್ತು ರೈತರಿಗೆ 25 ಕೆ.ಜಿ.ಗೆ 35 ಕೆ.ಜಿ. ಕ್ಯಾಪ್ಸಿಕಂ ಮಾರಾಟ ಮಾಡಿದೆ. ರೈತರು ಮೆಣಸಿನಕಾಯಿಯನ್ನು 1700 ರೂ. ಆದರೆ ಅದರಲ್ಲಿ 1450 ರೂ. ವನ್ನು ಕೆಲಸಗಾರರಿಗೆ ಇಂಧನ ವೆಚ್ಚ ಹೊರತಾಗಿ ಹೀಗೆ ತಾನು ಬೆಳೆದ ಬೆಳೆಗೆ ಒಂಚೂರು ಲಾಭವಿಲ್ಲದಿದ್ದರೆ ರೈತರು ಬದುಕುವುದು ಹೇಗೆ ಎಂದು ರಾಜೇವಾಲ್ ಹೇಳಿದ್ದಾರೆ.
ರೈತರು ಹಾಲು ಮತ್ತು ತರಕಾರಿಗಳನ್ನು ನಗರಗಳಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿ ಎಂಬ ಘೋಷಣೆ ಮೂಲಕ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಕರೆ ನೀಡಲಾಗಿದೆ. ಸ್ವಾಮಿನಾಥನ್ ಕಮಿಷನ್ ವರದಿಯನ್ನು, ಒಟ್ಟು ರೈತರು ಸಾಲ ನೀಡುವಿಕೆಗಳನ್ನು ಜಾರಿಗೆ ತರುವುದು ಮತ್ತು ರೈತನಿಗೆ ಕನಿಷ್ಟ ಆಶ್ವಾಸಿತ ಆದಾಯವನ್ನು ಕೊಡುವುದು ನಮ್ಮ ಮುಖ್ಯ ಬೇಡಿಕೆಗಳು ಎಂದು ರಾಜವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos